ಶವಾಗಾರ ಸಮಸ್ಯೆಗಳ ಆಗರ

ಶವಾಗಾರ ಸಮಸ್ಯೆಗಳ ಆಗರ

ಹೆಣ ಕೊಯ್ಯಲೂ ನಾನೇ ಕೈ ಜೋಡಿಸಬೇಕಿದೆ ಎಂದ ಶಾಸಕ ಬಸವಂತಪ್ಪ

ಸಿ.ಜಿ. ಆಸ್ಪತ್ರೆಯ ಶವಾಗಾರ ಸೋರುತ್ತಿದೆ. ಅಲ್ಲಿನ ಶೈತ್ಯಾಗಾರ ಕೆಟ್ಟಿದೆ. ಉಪಕರಣಗಳೂ ಇಲ್ಲ. ಸುತ್ತಲೂ ಕತ್ತಲು, ಎಲ್ಲವೂ ದುಸ್ಥಿತಿ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಶವಾಗಾರದ ಕೆಲಸಕ್ಕೆ ಕೆಲ ವೈದ್ಯರು ಹಿಂಜರಿ ಯುತ್ತಾರೆ. ಇದರಿಂದಾಗಿ ಶವಾಗಾರದಿಂದ ಹೆಣ ಒಯ್ಯಲು ದಿನಗಟ್ಟಲೆ ಕಾಯುವ ಪರಿಸ್ಥಿತಿ ಇದೆ ಎಂದು ಹೇಳಿದರು.  ಶಾಸಕನಾಗುವ ಮುಂಚೆ ಶವ ಪರೀಕ್ಷೆಗೆ ನಾನು ನೆರವಾಗುತ್ತಿದ್ದೆ. ಮೊನ್ನೆಯೂ ಹೆಣ ಕೊಯ್ಯಲು ನಾನೇ ಕೈ ಜೋಡಿಸಬೇಕಾದ ಪರಿಸ್ಥಿತಿಗಳು ಬಂದಿವೆ ಎಂದು ಶಾಸಕ ಬಸವಂತಪ್ಪ ಹೇಳಿದರು.

ಸಿ.ಜಿ. ಆಸ್ಪತ್ರೆಯ ಡಾ. ಮೋಹನ್ ಅವರು ಮಾತ್ರ ಯಾವುದೇ ಸಮಯದಲ್ಲಾದರೂ ಶವಾಗಾರದ ಕೆಲಸಕ್ಕೆ ಮುಂದೆ ಬರುತ್ತಿದ್ದಾರೆ. ಮೊನ್ನೆ ಶವ ಪರೀಕ್ಷೆಗೆ ಡಾ. ಮೋಹನ್ ಅವರ ಸಹಾಯಕರು ಬರಲಿಲ್ಲ. ಕೊನೆಗೆ ನಾನೇ ಸಹಾಯಕ್ಕೆ ನಿಲ್ಲಬೇಕಾಯಿತು ಎಂದರು.

error: Content is protected !!