ಕನ್ನಡ ಭಾಷೆಗೆ ಕುತ್ತು ಬಂದಿರುವುದು ನಮ್ಮವರಿಂದಲೇ : ಬಾ.ಮ. ಆತಂಕ

ಕನ್ನಡ ಭಾಷೆಗೆ ಕುತ್ತು ಬಂದಿರುವುದು ನಮ್ಮವರಿಂದಲೇ : ಬಾ.ಮ. ಆತಂಕ

ಅಥಣಿ ಕಾಲೇಜಿನಲ್ಲಿ
ಕರ್ನಾಟಕ ರಾಜ್ಯೋತ್ಸವ

ದಾವಣಗೆರೆ, ನ.19- ನಮ್ಮ ಭಾಷೆಯ ಬಗ್ಗೆ ಭ್ರಮೆ ಗಳನ್ನು ತುಂಬಾಬಾರದು. ನಮ್ಮ ಭಾಷೆಯಲ್ಲಿ ಜನಪರ ತತ್ವವಿದೆ. ನಮ್ಮ ಕನ್ನಡ ಭಾಷೆಗೆ ಕುತ್ತು ಬಂದಿರುವುದು ನಮ್ಮವರಿಂದಲೇ, ನಮ್ಮ ದಿನನಿತ್ಯ ಕೆಲಸಕಾರ್ಯಗಳಿಂದಲೇ ಎಂದು ಹಿರಿಯ ಪತ್ರಕರ್ತ – ಸಾಹಿತಿ ಬಾ.ಮ. ಬಸವರಾಜಯ್ಯ ಅವರು ಆತಂಕ ವ್ಯಕ್ತಪಡಿಸಿದರು.

ಅವರು, ನಗರದ ಅಥಣಿ ಕಾಲೇಜಿನ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿದರು.

ನಮ್ಮ ಭಾಷೆಯ ಕನಸನ್ನು ಬೇರೆ ಭಾಷೆಯಿಂದ ಪಡೆಯಲು ಸಾಧ್ಯವಿಲ್ಲ. ಪ್ರಸ್ತುತವಾಗಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳೋಣ, ಅದರ ವೈಭವವನ್ನು ಮತ್ತೆ ಪಡೆಯೋಣ ಎಂದು ಮಾತಾನಾಡಿದರು.

ಮೊದಲು ಭಾಷಾವಾರು ಪ್ರಾಂತ್ಯಗಳ ಹೋರಾಟ ಆರಂಭ, ಕರ್ನಾಟಕದಲ್ಲಿ ಮೊದಲಿಗೆ ಅನೇಕ ಪ್ರತ್ಯೇಕ ಹೋರಾಟಕ್ಕೆ ನಡೆದವು. ಆರಂಭದಲ್ಲಿ ಪಟ್ಟರಾಯಲು ಆತ್ಮಹತ್ಯೆ ಮಾಡಿಕೊಂಡರು. ಮದರಾಸು ಪ್ರಾಂತ್ಯ, ಹೈದ್ರಾಬಾದ್ ಪ್ರಾಂತ್ಯ, ಮುಂಬಯಿ ಪ್ರಾಂತ್ಯ ಹಾಗೆ ಬೇರೆ ಪ್ರಾಂತ್ಯಗಳಾಗಿದ್ದವು. ಮೈಸೂರು ಪ್ರಾಂತ್ಯದ ಜನರ ಪ್ರಾಬಲ್ಯ ಹೆಚ್ಚಿತ್ತು. ನಂತರ ಇದಕ್ಕೆ ಮೈಸೂರು ರಾಜ್ಯವೆಂದು ಕರೆದರು.

ಜನಪರ ಹಿಂದಿನ ಸಾಹಿತ್ಯದಲ್ಲಿ ಕರ್ನಾಟಕದ ಪರವನ್ನು ಕಾಣಬಹುದಾಗಿದೆ. ದೇವರಾಜ ಅರಸು ಅವರು, 1973 ಮೈಸೂರನ್ನು ಕರ್ನಾಟಕ ಎಂಬುದಾಗಿ ಮರುನಾಮಕರಣ ಮಾಡಿದರು. ಚೆನ್ನವೀರ ಕಣವಿ ಹೇಳುವಂತೆ ಹೆಸರಾಯಿತು. ಕರ್ನಾಟಕ ಉಸಿರಾಗಲಿ ಕನ್ನಡ ಎಂದಿದ್ದಾರೆ. 

ಸ್ವಂತ ಕನ್ನಡವನ್ನು ಮಾಧ್ಯಮವಾಗಿ ಕಲಿಸಬೇಕೆಂಬು ದನ್ನು ತಿಳಿಸಿದರು. ವಿನೋಬಾ ಭಾವೆಯವರು ಕನ್ನಡವನ್ನು `ಲಿಪಿಗಳ ರಾಣಿ’ ಎಂದು ಬಣ್ಣಿಸಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆಗೆ ಅನೇಕ  ತೊಡಕುಗಳಿದ್ದವು ಎಂದು ಬಸವರಾಜಯ್ಯ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಭೀಮಾಶಂಕರ ಜೋಷಿ ಅವರು ಕನ್ನಡ ಪ್ರಾಂತ್ಯ ಕುರಿತು ಮಾತನಾಡಿ, ಸ್ವತಂತ್ರ ಪೂರ್ವದಿಂದ ಹೋರಾಟ ಆರಂಭವಾಯಿತು. ಮೊದಲು ಕರ್ನಾಟಕ ಹರಿದು ಹಂಚಿಹೋಗಿತ್ತು. ನಾಡಗೀತೆಯನ್ನು ಕುವೆಂಪುರವರು 1929 ರಲ್ಲಿ ಬರೆದರು.  ಕನ್ನಡ ಭಾಷೆಯ ಉಲ್ಲೇಖಗಳು ಅನೇಕ ಕಡೆ ಇವೆ. ಅವುಗಳನ್ನು ನಾವು ನಿರ್ಲಕ್ಷಿಸಿದ್ದೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಬಿ.ಸಿ.ಶಿವಕುಮಾರ್ ಅವರು, ಕನ್ನಡ ಕಲಿಯುವುದಲ್ಲ, ಅದನ್ನು ಆಡಬೇಕು, ಬಳಸಬೇಕು. ನಾವು ಆಡುವ ಭಾಷೆಯೇ ಓದುವ ಭಾಷೆಯಾಗಬೇಕೆಂದು ಕರೆ ನೀಡಿದರು. ಭಾಷೆಗೂ ಬುದ್ದಿವಂತಿಕೆಗೂ ಯಾವುದೇ  ಸಂಬಂಧವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಷಣ್ಮುಖಪ್ಪ ಅವರು, ನಾವುಗಳು ರಾಜ್ಯೋತ್ಸವದ ಕನ್ನಡಿಗರಾಗಬಾರದು, ದಿನನಿತ್ಯದ ಕನ್ನಡಿಗರಾಗಬೇಕು. ಯಾರು ಮಾತೃಭಾಷೆಯಲ್ಲಿ ಅಧ್ಯಯನ ಮಾಡುತ್ತಾಯೋ ಅವರು ಪಾಂಡಿತ್ಯ ಪಡೆದುಕೊಳ್ಳುತ್ತಾರೆಂದು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ  ಶ್ಯಾಗಲೆ, ವಾಣಿಜ್ಯಶಾಸ್ತ್ರ ವಿಭಾಗದ ಡಾ. ಭಾಗ್ಯಶ್ರೀ ಹುಬ್ಬಳ್ಳಿಕರ್, ಕನ್ನಡ ವಿಭಾಗದ ಮಂಜುನಾಥ ಕುರ್ಕಿ, ರಾಜ್ಯಶಾಸ್ತ್ರ ವಿಭಾಗದ ವಿಶ್ವನಾಥ್ ಮತ್ತಿತರ ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಚೈತ್ರ ಹಾಗೂ ಮೇಘನಾ ಯಕ್ಷಗಾನ ಕರೆಯನ್ನು ಅನಾವರಣಗೊಳಿಸಿದರು. ಕು. ಲಕ್ಷ್ಮಿ ಮತ್ತು ಸಂಗಡಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಯು.ಕಾವ್ಯ ಸ್ವಾಗತಿಸಿದರು. ಎಸ್.ಎಂ.ಮಾಧವಿ ವಂದಿಸಿದರು. ಬಿ.ಆರ್.ಅಶ್ವಿನಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

error: Content is protected !!