ಕೀರ್ತನೆಗಳ ಮೂಲಕವೇ ಅಸಮಾನತೆ ವಿರುದ್ಧ ಜಾಗೃತಿ

ಕೀರ್ತನೆಗಳ ಮೂಲಕವೇ ಅಸಮಾನತೆ ವಿರುದ್ಧ ಜಾಗೃತಿ

ಹರಪನಹಳ್ಳಿ ಕನಕದಾಸ ಜಯಂತ್ಯೋತ್ಸವದಲ್ಲಿ ಶಾಸಕರಾದ ಎಂ.ಪಿ ಲತಾ

ಹರಪನಹಳ್ಳಿ,ನ.18- ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಸಾಮಾಜಿಕ ಅಸಮಾನತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಜ್ಯೂನಿಯರ್ ಕಾಲೇಜಿನ ಗಾಂಧಿ ಮೆಮೋರಿಯಲ್ ಆವರಣದಲ್ಲಿ ಇಂದು ತಾಲ್ಲೂಕು ಆಡಳಿತ ಆಯೋಜಿಸಿದ್ದ ಭಕ್ತ ಕನಕದಾಸ ಹಾಗೂ ವೀರವನಿತೆ ಒನಕೆ ಓಬವ್ವ  ಜಯಂತಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಕ್ತಿ ಪಂಥದ ಚಳುವಳಿ ಮೇಲೆ ನಂಬಿಕೆ ಇಟ್ಟಿದ್ದ ಕನಕದಾಸರು ಶ್ರೀಕೃಷ್ಣನ ಪರಮಭಕ್ತರಾಗಿ ದ್ದರು, ಇವರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನು ಉಡುಪಿಯ ಮಠದಲ್ಲಿ ಗೋಡೆ ಸೀಳಿ ದರ್ಶನ ನೀಡಿದ್ದರು. ಅದು ಇಂದು ಕನಕ ಕಿಂಡಿಯಾಗಿ ಪ್ರಸಿದ್ಧಿ ಪಡೆದಿದೆ ಎಂದು  ಹೇಳಿದರು.

ವೀರವನಿತೆ ಒನಕೆ ಓಬವ್ವ ಅವರು ಶೌರ್ಯ ಸಾಹಸದ ಮೂಲಕ ಶತ್ರು ಸೈನಿಕರನ್ನು ಸದೆಬಡಿದು ಚಿತ್ರದುರ್ಗದ  ಕೋಟೆಯನ್ನು ಕಾಪಾಡಿದ ವೀರ ಮಹಿಳೆ ಎಂದು ಸ್ಮರಿಸಿದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನಕದಾಸರು ಬಹುಮುಖ ಪ್ರತಿಭೆಯಾಗಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಸತೀಶ್,  ಉಪನ್ಯಾಸಕ ಅಜ್ಜಣ್ಣ  ಉಪನ್ಯಾಸ ನೀಡಿದರು. 

ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಬಿ.ವಿ.ಗಿರೀಶಬಾಬು, ಪುರಸಭಾ ಸದಸ್ಯ  ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್‌, ಅಬ್ದುಲ್ ರೆಹಮಾನ್, ಲಾಟಿ ದಾದಾಪೀರ್‌, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಪುರಸಭಾ ನಾಮ ನಿರ್ದೇಶಿತ ಸದಸ್ಯರಾದ ಎಚ್.ವಸಂತಪ್ಪ, ಗುಡಿ ನಾಗರಾಜ, ಅಬ್ದುಲ್ ಅಲೀಂ, ತಾ.ಪಂ.ಇಒ ವೈ.ಎಚ್.ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬಂಡ್ರಿ ಗೋಣಿಬಸಪ್ಪ, ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಪ್ರತಾಪ್, ಮುಖಂಡರಾದ ವೈ.ಕೆ.ಬಿ.ದುರುಗಪ್ಪ, ಕಲ್ಲೇರ ಬಸವರಾಜಪ್ಪ, ಗುಂಡಗತ್ತಿ ಕೊಟ್ರಪ್ಪ ಇತರರು ಇದ್ದರು.

error: Content is protected !!