ಒಂದೇ ದಿನ 1.65 ಕೋ.ರೂ ತೆರಿಗೆ ಸಂಗ್ರಹ: ಇಟ್ನಾಳ್

ಒಂದೇ ದಿನ 1.65 ಕೋ.ರೂ ತೆರಿಗೆ ಸಂಗ್ರಹ: ಇಟ್ನಾಳ್

ದಾವಣಗೆರೆ, ನ.12- ಜಿಲ್ಲೆಯಲ್ಲಿನ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲು ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಾಚರಣೆಯಲ್ಲಿ 1.65 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ವಿಶೇಷ ಆಂದೋಲನ ಕೈಗೊಳ್ಳಲಾಗಿತ್ತು. ಈ ವೇಳೆ ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿನ ತೆರಿಗೆಯನ್ನು ಸಂಗ್ರಹಿಸಲಾಗಿದೆ. 

ಚನ್ನಗಿರಿ ತಾಲ್ಲೂಕಿನಲ್ಲಿ  51,03,993 ರೂ., ದಾವಣಗೆರೆ ತಾಲ್ಲೂಕು  48,89,965 ರೂ., ಹರಿಹರ ತಾಲ್ಲೂಕು 2,28,77,792 ರೂ., ಹೊನ್ನಾಳ್ಳಿ ತಾಲ್ಲೂಕು 7,84,834 ರೂತ, ಜಗಳೂರು ತಾಲ್ಲೂಕು 5,22,251 ರೂ. ಹಾಗೂ  ನ್ಯಾಮತಿ ತಾಲ್ಲೂಕಿನಲ್ಲಿ  19,62,032 ಸೇರಿ ಒಟ್ಟು  1,65,50,871ಗಳ ತೆರಿಗೆ ಸಂಗ್ರಹಿಸಲಾಗಿದೆ.

error: Content is protected !!