ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ಹರಪನಹಳ್ಳಿಯಲ್ಲಿನ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಎಚ್. ಕೊಟ್ರೇಶ್

ಹರಪನಹಳ್ಳಿ, ನ. 12- ಟೇಬಲ್ ಟೆನಿಸ್ ಆಟವು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ   ಎಚ್. ಕೊಟ್ರೇಶ್  ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಟೇಬಲ್ ಟೆನಿಸ್ ಪಂದ್ಯಾವಳಿ ಮತ್ತು  ವಿಎಸ್‌ಕೆ ವಿಶ್ವವಿದ್ಯಾಲಯ ಬಳ್ಳಾರಿ  ತಂಡದ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ದೈಹಿಕ ಚಟುವಟಿಕೆ ಮತ್ತು ಒಳಾಂಗಣ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಈ ಪಂದ್ಯಾವಳಿ ಮಹತ್ವದ ಹೆಜ್ಜೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಹೂವಿನ ಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿಜಯಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸತೀಶ್ ಮಾತನಾಡಿದರು.  

ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ  ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಕಾಲೇಜ್ ತಂಡವು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ,  ಬಳ್ಳಾರಿ  ಎಸ್ಎಸ್ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ತಂಡವು ದ್ವಿತೀಯ ಸ್ಥಾನ ಪಡೆಯಿತು. 

ಮಹಿಳಾ ವಿಭಾಗದಲ್ಲಿ  ಕೊಟ್ಟೂರು ಶ್ರೀ ಕೊಟ್ಟೂರೇಶ್ವರ ಕಾಲೇಜ್  ಪ್ರಥಮ ಸ್ಥಾನ  ಪಡೆದರೆ, ಬಳ್ಳಾರಿ ವೀರಶೈವ ಕಾಲೇಜ್   ದ್ವಿತೀಯ ಸ್ಥಾನ ಪಡೆಯಿತು

ಕಾರ್ಯಕ್ರಮದಲ್ಲಿ  ಪ್ರಾಧ್ಯಾಪಕರಾದ ಡಾ. ಹರಾಳು ಬುಳ್ಳಪ್ಪ, ಎನ್.ಎಂ.ನಾಗರಾಜ್, ಡಾ. ಶಿವಕುಮಾರ್, ಡಾ. ಕವಿತಾ ಸಂಗನಗೌಡ, ನವಾಜ್    ಭಾಷಾ, ಐಕ್ಯುಎಸಿ ಸಂಚಾಲಕ  ಪುನೀತ್ ರಾಜ್, ಸಹಾಯಕ ಪ್ರಾಧ್ಯಾಪಕರಾದ ವೀರೇಶ, ಭಾಷಾ, ಬಾಲಾಜಿ, ವೀರೇಶ, ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ  ಸಿಬ್ಬಂದಿ  ಸವಿತಾ,  ಸರೋಜಾ  ದೀಪ, ಶಿವಕುಮಾರ ಸ್ವಾಮಿ ಸೇರಿದಂತೆ ಇತರರು ಇದ್ದರು.

error: Content is protected !!