ಏಷ್ಯಾ ಖಂಡದಲ್ಲೇ 2 ನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಮತ್ತು ಅನೇಕ ನಗರ- ಪಟ್ಟಣಗಳ, ಹಳ್ಳಿಗಳ ಜನರಿಗೆ ಕುಡಿಯುವ ನೀರು ಪೂರೈಸುವ ಮತ್ತು ಸಾವಿರಾರು ಎಕರೆಗೆ ನೀರುಣಿಸುವ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಇತ್ತೀಚಿಗೆ ಸುರಿದ ನಿರಂತರ ಮಳೆಯಿಂದಾಗಿ ಹಾಗೂ ಭದ್ರಾ ನಾಲೆಯ ನೀರಿನಿಂದಾಗಿ ತುಂಬಿ ತುಳುಕುತ್ತಿದ್ದು, ಕೆರೆಯಲ್ಲಿ ಬರುವ ನೀರಿನ ಅಲೆಗಳು ಸಮುದ್ರದ ಅಲೆಗಳಂತೆ ಕಣ್ಮನ ಸೆಳೆಯುತ್ತಿವೆ .
ತುಂಬಿ ತುಳುಕುತ್ತಿರುವ ಸೂಳೆಕೆರೆ …
