ಜಗಳೂರು : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭ

ಜಗಳೂರು : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭ

ಜಗಳೂರು, ಅ.20-  ಜಗಳೂರಿನಲ್ಲಿ ಕಳೆದ 28 ವರ್ಷಗಳ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಬರುವ ಡಿಸೆಂಬರ್ 28 ಮತ್ತು 29ರಂದು ಕನ್ನಡ ನುಡಿಧಾರೆಯ ಸಮ್ಮೇಳನ ಜರುಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೊನ್ನೆ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಶಾಸಕರು ಮಾತನಾಡಿದರು.

ನಾಡು ನುಡಿಯ ಜಾತ್ರೆ ಮಾಡುವುದಕ್ಕೆ ಇಚ್ಚಾಶಕ್ತಿ ಬೇಕಿದ್ದು, ಇದಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ನಾನು ಎಂಬ ಭಾವನೆ ತೊರೆದು, ನಾವು ಎಂಬಂತೆ ನಡೆಯೋಣ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 14 ಸಮ್ಮೇಳನ ಗಳಾಗಿವೆ. ನನ್ನ ಆಡಳಿತಾವಧಿಯಲ್ಲಿ ಈ ವರೆಗೆ 3 ಜಿಲ್ಲಾ ಸಮ್ಮೇಳನಗಳಾಗಿದ್ದು, 4ನೇ ಸಮ್ಮೇಳನ ಜಗಳೂರಿನಲ್ಲಿ ಜರುಗಲಿದೆ ಎಂದು ಹೇಳಿದರು.

ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯನವರು ಆಗಮಿಸಿದ್ದಾಗ ಕೆರೆಗಳಿಗೆ ನೀರು ತುಂಬಿಸಲು ಅನುದಾನ ಘೋಷಿಸಿದ್ದರು. ಹಾಗಾಗಿ
ಅವರಿಂದಲೇ ಸಮ್ಮೇಳನದ ಉದ್ಘಾಟನೆ ಮಾಡಿಸಬಹುದು, ಇದು ಈ ಭಾಗದ ಜನರ ಆಸೆಯೂ ಆಗಿದೆ ಎಂದು ತಿಳಿಸಿದರು.

ಜಗಳೂರಿನ ಪ್ರತಿ ಹಳ್ಳಿಗಳಲ್ಲೂ ಭುವನೇಶ್ವರಿ ದೇವಿಯ ಭಾವ ಚಿತ್ರದ ಮೆರವಣಿಗೆ ಮಾಡುವ ಮೂಲಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಾ ಎಲ್ಲರನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕು ಎಂದು ಹೇಳಿದರು.

ನಾಡಿನ ಹಿತ ಚಿಂತಕರು ಮತ್ತು ಸಾಹಿತಿಗಳನ್ನು ಸಮ್ಮೇಳನಕ್ಕೆ ಕರೆಸುವ ಮೂಲಕ ಒಳ್ಳೆಯ ವಿಷಯಗಳನ್ನು ಜನರಿಗೆ ತಲುಪಿಸುವ ವ್ಯವಸ್ಥೆ ಮಾಡೋಣ ಎಂದರು.

ಪ್ರಾಸ್ತಾವಿಕ ಮಾತನಾಡಿದ ಎನ್.ಟಿ. ಎರ್ರಿಸ್ವಾಮಿ ಅವರು, ಬರದ ನಾಡು, ಭಂಡಾರದ ನಾಡು, ಬಂಗಾರದ ನಾಡು, ಕಲೆಗಳ ತವರೂರು, ಜಗಳೂರಾಗಿದ್ದು ಇಲ್ಲಿ ಎಲ್ಲರನ್ನೂ ಒಳಗೊಂಡಂತೆ ಸಮ್ಮೇಳನ ಆಯೋಜನೆಗೊಳ್ಳಬೇಕು ಎಂದರು.

ಮಹಾಲಿಂಗರಂಗ, ಅಡಿಕೆ ಅವಾಂತರ ಕುರಿತ ಗೋಷ್ಠಿಗಳು, ಜಿಲ್ಲೆಯಲ್ಲಿ ರಚನೆಯಾದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ, ಕೊಂಡುಕುರಿ ಬಗ್ಗೆ ಮಾಹಿತಿ ಮತ್ತು ವಸ್ತು ಪ್ರದರ್ಶನ, ತಾಲ್ಲೂಕಿನ ಸಾಹಿತಿಗಳಿಗೆ ಅವಕಾಶ, ಇಮಾಮ್ ಸಾಹೇಬರ ವೇದಿಕೆ ಮತ್ತು ಮಹಲಿಂಗ ರಂಗರ ಮಹಾದ್ವಾರ ನಿರ್ಮಾಣ ಸೇರಿದಂತೆ ಇತರೆ ಅಭಿಪ್ರಾಯಗಳನ್ನು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ ಜಗದೀಶ್ ಕೂಲಂಬಿ, ಜಗಳಿ ಪ್ರಕಾಶ್,   ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧು ಕುಮಾರ್, ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು, ಜಗಳೂರಿನ ಬಿ.ಸಿ. ಮಲ್ಲಿಕಾರ್ಜುನ, ತಾಲೂಕು ಅಧ್ಯಕ್ಷೆ ಸುಜಾತಮ್ಮ ರಾಜು, ಕಾರ್ಯದರ್ಶಿ ಗೀತಾ ಮಂಜು, ಮಹೇಶ್ವರಪ್ಪ, ಬಸವೇಶ್ ಸಿ.ಎಂ. ಹೊಳೆ, ಮಹಾಂತೇಶ್, ಸಿ. ತಿಪ್ಪೇಸ್ವಾಮಿ, ನಾಗರಾಜಪ್ಪ, ಎಸ್.ಟಿ. ವಾಣಿ, ಎಸ್.ಆರ್. ಇಂದಿರಾ, ಆರ್. ಮರುತೇಶ್ ತಮಲೇಹಳ್ಳಿ, ಹೆಚ್.ಎಸ್. ವಸಂತ್, ಗುರುಮೂರ್ತಿ ತಮಲೇಹಳ್ಳಿ, ಪಿ. ಹಾಲಪ್ಪ, ಬಿ.ಪಿ. ಷಣ್ಮುಖಪ್ಪ, ಸಿ. ತಿಪ್ಪೇಸ್ವಾಮಿ, ಹೆಚ್. ತಿಪ್ಪೇಸ್ವಾಮಿ, ಬಿ. ಸತೀಶ್, ಜಿ.ಎಸ್. ಸಿದ್ದೇಶ್, ಡಿ.ಎಂ. ಗುರುಮೂರ್ತಿ, ನಾಗಲಿಂಗಪ್ಪ, ಕೆ. ಕೃಷ್ಣಮೂರ್ತಿ, ಕೃಷ್ಣಮೂರ್ತಿ ನಾಯ್ಕ, ಎಂ. ರಾಜಪ್ಪ, ಬಿ. ಮಾರಪ್ಪ, ಎಂ. ಮಾರುತಿ, ಹೆಚ್.ಎಸ್. ಶಿವಮ್ಮ, ಆರ್. ಓಬಳೇಶ್, ಪಿ. ಹಾಲಪ್ಪ, ಕೆ. ಕೃಷ್ಣಮೂರ್ತಿ, ಎಲ್.ಜಿ. ಲೋಕೇಶ್, ಬಸವರಾಜ್ ಬೆಲ್ಲದ, ಜಿ.ಎನ್. ಸಿದ್ದೇಶ್, ರೇವತಿ, ನಾಗರತ್ನ, ಎಂ. ಮಾರುತಿ, ಧನ್ಯಕುಮಾರ್, ಹೆಚ್. ಬಾಬು, ರವಿಕುಮಾರ್, ಲೋಕೇಶ್, ಬಸವರಾಜ್, ಮಹ್ಮದ್ ಗೌಸ್, ರಕೀಬ್, ಸೋಮನಗೌಡ ಮತ್ತು ಇತರರು ಉಪಸ್ಥಿತರಿದ್ದರು. 

ಕಸಪಾ ನಿರ್ದೇಶಕರಾದ ಶ್ರೀಮತಿ ರುದ್ರಾಕ್ಷಿಬಾಯಿ ಪುಟ್ಟಾನಾಯಕ್ ಪ್ರಾರ್ಥಿಸಿದರು. ನಾಗಲಿಂಗಪ್ಪ ಸ್ವಾಗತಿಸಿದರು.

error: Content is protected !!