ದಾವಣಗೆರೆ, ಅ. 18- ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಕಚೇರಿ ಕಟ್ಟಡದ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಸಿ. ಚಂದ್ರಶೇಖರ್ ಐಗೂರು ಹಾಗೂ ಎಲ್ಲಾ ಕಾರ್ಯನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಉಪ ಚುನಾವಣಾಧಿಕಾರಿ ಪ್ರೊ.ವೈ. ವೃಷಭೇಂದ್ರಪ್ಪ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಸಿ. ಚಂದ್ರಶೇಖರ್ ಐಗೂರು, ಉಪಾಧ್ಯಕ್ಷರಾಗಿ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ಕಿರುವಾಡಿ ವಿ. ಸೋಮಶೇಖರ್, ವೇದಮೂರ್ತಿ ಶಾಮನೂರು, ಆರ್.ಟಿ. ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಬಸವರಾಜ್, ಕಾರ್ಯದರ್ಶಿಗಳಾಗಿ ಎ.ವಿ. ಪ್ರಸಾದ್ (ಅಥಣಿ), ಎಂ.ಜೆ. ಗಿರೀಶ್ (ಮಾಗಾನಹಳ್ಳಿ), ಜಿ.ಎಂ. ವಿಶ್ವನಾಥ್ (ಬುಳ್ಳಾಪುರ), ಎ.ಎಸ್. ಸುಧಾ (ಅಜ್ಜಂಪುರ), ಸಂಘಟನಾ ಕಾರ್ಯದರ್ಶಿಯಾಗಿ ಡಿ.ಎಂ. ಶಿವಕುಮಾರ್, ಖಜಾಂಚಿಯಾಗಿ ಬಸವರಾಜಪ್ಪ ಬೆಳಗಾವಿ ಅವರುಗಳು ಆಯ್ಕೆಗೊಂಡಿದ್ದಾರೆ.