ನಗರದಲ್ಲಿ ಇಂದು ಶೋಭಾ ಯಾತ್ರೆ : ಪೊಲೀಸ್ ಪಥಸಂಚಲನ

ನಗರದಲ್ಲಿ ಇಂದು ಶೋಭಾ ಯಾತ್ರೆ : ಪೊಲೀಸ್ ಪಥಸಂಚಲನ

ದಾವಣಗೆರೆ, ಅ.4- ನಗರದಲ್ಲಿ ನಾಳೆ ದಿನಾಂಕ 5 ರ ಶನಿವಾರ ಜರುಗಲಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ದೃಷ್ಠಿಯಿಂದ ಎಸ್ಪಿ ಶ್ರೀಮತಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಇಂದು ‘ಪೊಲೀಸ್ ಪಥ ಸಂಚಲನ’ ಹಮ್ಮಿಕೊಳ್ಳಲಾಗಿತ್ತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ ಮತ್ತು ಜಿ ಮಂಜುನಾಥ, ಸಹಾಯಕ ಪೊಲೀಸ್ ಅಧೀಕ್ಷಕ  ಸ್ಯಾಮ್ ವರ್ಗೀಸ್, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ. ಎಸ್.,  ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್, ಪೊಲೀಸ್ ನಿರೀಕ್ಷಕರುಗಳಾದ ಗುರುಬಸವರಾಜ, ನೆಲವಾಗಲು ಮಂಜುನಾಥ, ಅಶ್ವಿನ್ ಕುಮಾರ, ಸುನೀಲ್ ಕುಮಾರ್,
ನೂರ್ ಅಹಮ್ಮದ್, ಶ್ರೀಮತಿ ಪ್ರಭಾವತಿ,
ಶ್ರೀಮತಿ ಮಲ್ಲಮ್ಮ, ಅಶ್ವಿನ್ ಕುಮಾರ್, ಶ್ರೀಮತಿ ಚೌಬೆ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!