ನಗರದಲ್ಲಿ ಪಿಎಸ್ಐ ಪರೀಕ್ಷೆ ಸುಗಮ

ನಗರದಲ್ಲಿ ಪಿಎಸ್ಐ ಪರೀಕ್ಷೆ ಸುಗಮ

ದಾವಣಗೆರೆ ಪರಿಕ್ಷಾ ಕೇಂದ್ರವೊಂದರ ಬಳಿ ಪಿಎಸ್‌ಐ ಪರಿಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯುತ್ತಿರುವುದು ಹಾಗೂ ಪರೀಕ್ಷಗೆ ಬಂದ ಅಭ್ಯರ್ಥಿಯೊಬ್ಬರು ಕಿವಿಗೆ ಹಾಕಿಕೊಂಡಿದ್ದ ಓಲೆ ತೆಗೆಸುತ್ತಿರುವ ಪೊಲೀಸ್ ಸಿಬ್ಬಂದಿ.

11 ಕೇಂದ್ರಗಳಲ್ಲಿ 3909 ಅಭ್ಯರ್ಥಿಗಳು ಹಾಜರು

ದಾವಣಗೆರೆ, ಅ.3 – ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆ ಗುರುವಾರ ಸುಗಮವಾಗಿ ನೆರವೇರಿದೆ.

ನಗರದ 11 ಕೇಂದ್ರಗಳಲ್ಲಿ ನಡೆದ ಮೊದಲ ಹಾಗೂ ಎರಡನೇ ಪತ್ರಿಕೆ ಪರೀಕ್ಷೆಗೆ 3,909 ಅಭ್ಯರ್ಥಿಗಳು ಹಾಜರಾಗಿದ್ದರು. ಒಟ್ಟು 11 ಕೇಂದ್ರಗಳಿಂದ 6,464 ಅಭ್ಯರ್ಥಿಗಳು ನೋಂದಾಯಿಸಿದ್ದು, ಇದರಲ್ಲಿ 2,051 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಉಳಿದಂತೆ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ. ಪಿ.ಎಸ್.ಐ. ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ಹಲವಾರು ಸೂಚನೆಗಳನ್ನು ನೀಡಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ನಿಯಮಗಳ ಪಾಲನೆಗೆ ಕ್ರಮ ತೆಗೆದುಕೊಳ್ಳಲಾಗಿತ್ತು. ನಿಯಮ ಪಾಲಿಸದ ಅಭ್ಯರ್ಥಿಗಳನ್ನು ತಡೆದು, ಈ ಬಗ್ಗೆ ಸೂಚನೆಯನ್ನೂ ನೀಡುತ್ತಿದ್ದುದು ಕಂಡು ಬಂತು. ಪರೀಕ್ಷೆಗಾಗಿ ಡ್ರೆಸ್ ಕೋಡ್ ವಿಧಿಸಲಾಗಿತ್ತು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗು ವುದನ್ನು ನಿರ್ಬಂಧಿಸಲು ಮುನ್ನೆಚ್ಚರಿಕೆ ವಹಿಸಲಾಗಿತ್ತು. 

error: Content is protected !!