ಜಗಳೂರು ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಟೆಂಡರ್ ಪ್ರಕ್ರಿಯೆ : ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಟೆಂಡರ್ ಪ್ರಕ್ರಿಯೆ : ಶಾಸಕ ಬಿ.ದೇವೇಂದ್ರಪ್ಪ

ಕಿಷ್ಕಿಂಧೆ ಮುಖ್ಯ ರಸ್ತೆಗೆ ಸಿಗಲಿ ಮುಕ್ತಿ

ಪಟ್ಟಣದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು. ವಾಹನ ದಟ್ಟಣೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಸಂಭವಿಸಿದ ಅಪಘಾತಗಳು ಜೀವ ಬಲಿ ಪಡೆದಿವೆ. ಶೀಘ್ರದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣಗೊಂಡು ವಿಶಾಲ ರಸ್ತೆ ಸುಗಮ ಸಂಚಾರಕ್ಕೆ ಶಾಸಕರು, ಜಿಲ್ಲಾಧಿಕಾರಿಗಳು ಶೀಘ್ರ ಕಾಮಗಾರಿ ಆರಂಭಿಸಿ, ಕಿಷ್ಕಿಂಧೆ ಮುಖ್ಯ ರಸ್ತೆಗೆ ಮುಕ್ತಿ ಸಿಗಲಿ ಎಂಬುದು ಪ್ರಗತಿಪರ ಸಂಘಟನೆ ಗಳು ಹಾಗೂ  ಸಾರ್ವಜನಿಕರ ಒತ್ತಾಯ.

ಜಗಳೂರು, ಸೆ.19- ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ಮುಖ್ಯ ರಸ್ತೆ ವಿಸ್ತರಣೆಗೆ 20 ಕೋಟಿ ರೂ.ವೆಚ್ಚದ  ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು. ಕಾನೂನು ತೊಡಕುಗಳ ಇತ್ಯರ್ಥದ ನಂತರ ಶೀಘ್ರದಲ್ಲಿ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದ್ದಾರೆ.

ಶಾಸಕರ ನಿವಾಸದಲ್ಲಿ ದಾಖಲೆಯೊಂದಿಗೆ ಅನೌಪಚಾರಿಕ ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆಯ  ಆಶೀರ್ವಾದದಿಂದ ಶಾಸಕನಾಗಿದ್ದು, ಸದಾ ನಾನು ಜನಪರವಾಗಿ ಅಭಿವೃದ್ಧಿ ಕೆಲಸ ಮಾಡುವೆ. ಯಾರ ಮೇಲಿನ ವೈರತ್ವ, ಸೇಡಿನ ಪ್ರತೀಕಾರ, ರಾಜಕಾರಣದಿಂದ  ನಿರ್ಧಾರ ಕೈಗೊಂಡಿಲ್ಲ. ಸರ್ವರೂ ಪಕ್ಷಾತೀತವಾಗಿ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದು ಶಾಸಕರು ಮನವಿ ಮಾಡಿದರು. 

ಪಟ್ಟಣದ ಹೃದಯಭಾಗದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು. ರಸ್ತೆ ವಿಸ್ತರಣೆ ಗೊಳ್ಳದೆ ದಶಕಗಳಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು.ನನ್ನ ಆಡಳಿತಾವಧಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕರ ಸಂಚಾರದ ಹಿತದೃಷ್ಟಿ, ಪಟ್ಟಣದ ಅಭಿವೃದ್ಧಿಗಾಗಿ  ರಸ್ತೆ ವಿಸ್ತರಣೆಗೆ ದೃಢ ನಿರ್ಧಾರ ಕೈಗೊಂಡು ಮಾರ್ಕಿಂಗ್ ಮಾಡಲಾಗಿದೆ.

ರಸ್ತೆ ಬದಿ  ವರ್ತಕರು, ಕಟ್ಟಡ ಮಾಲೀಕರು, ಕೋರ್ಟ್ ತಡೆಯಾಜ್ಞೆಯತ್ತ ಮುಖ ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕಾನೂನು ತೊಡಕುಗಳ ಇತ್ಯರ್ಥದ ನಂತರ  ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು.

2008 ರಲ್ಲಿ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದ ನೋಟಿಫಿಕೇಶನ್ ನಂತೆ ಮಹಾಯೋಜನೆಯಡಿ ರಾಜ್ಯ ಹೆದ್ದಾರಿ (ಎಸ್ ಎಚ್)-65 ಮಾರ್ಪಟ್ಟಿದೆ. 283.25 ಕಿ.ಮೀ ನಿಂದ 337.95 ಕಿ.ಮೀ  ದೂರ ಕ್ರಮಿಸುವ ರಾಜ್ಯ ಹೆದ್ದಾರಿ ಆಯ್ಕೆಗೊಳಿಸಲಾಗಿದೆ.ಇದು ಉಡುಪಿ ,ಹೆಬ್ರಿ, ಆಗುಂಬೆ, ಬೇಗಾರ್, ಕೊಪ್ಪ, ನರಸಿಂಹರಾಜಪುರ, ಸುಳಗೇರಿ, ಭದ್ರಾವತಿ, ಚನ್ನಗಿರಿ, ಶಾಂತಿಸಾಗರ,ದಾವಣಗೆರೆ, ಜಗಳೂರು, ಮುಸ್ಟೂರು, ಬಿಜಿ ಕೆರೆ ಮಾರ್ಗದಲ್ಲಿ ಹಾದು ಹೋಗಿದೆ.

ಜಗಳೂರು ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ 54.7 ಕಿ.ಮೀ ದೂರದ ರಸ್ತೆ ಕ್ರಮಿಸಿ ಹಾದು ಹೋಗಿದೆ. ಪಟ್ಟಣದ ಮಧ್ಯಭಾಗದಿಂದ 1.35 ಕಿ.ಮೀ ಚತುಷ್ಪಥ ರಸ್ತೆ ಸೇರಿದಂತೆ ಒಟ್ಟು 2ಕಿ.ಮೀ ದೂರದಲ್ಲಿ ಹೆದ್ದಾರಿ ವಿಸ್ತರಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

error: Content is protected !!