ಜಿಲ್ಲೆಯಲ್ಲಿ 80 ಕಿ.ಮೀ ಮಾನವ ಸರಪಳಿ

ಜಿಲ್ಲೆಯಲ್ಲಿ 80 ಕಿ.ಮೀ ಮಾನವ ಸರಪಳಿ

ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ

ದಾವಣಗೆರೆ, ಸೆ.9- ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಬೀದರ್‌ನಿಂದ ಚಾಮರಾಜನಗರ ವರೆಗೆ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸ ಲಿದ್ದು, ಜಿಲ್ಲೆಯಲ್ಲಿ 80 ಕಿ.ಮೀ ಉದ್ದಗಲ ದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಸಂವಿಧಾನ ಜಾಗೃತಿ ಮೂಡಿಸ ಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು. 

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣ ದಲ್ಲಿ  ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂಘ, ಸಂಸ್ಥೆ ಪದಾಧಿಕಾರಿಗಳು, ಅಧಿಕಾರಿಗ ಳೊಂದಿಗೆ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

ಸೆ.15 ರ ಬೆಳಿಗ್ಗೆ 8.30 ರಿಂದ 9.30 ವರೆಗೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ.  ಜಿಲ್ಲೆಯ ಗಡಿ ತಾಲ್ಲೂಕು ನ್ಯಾಮತಿಯ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ಪಟ್ಟಣ ಸೇರಿದಂತೆ ರಾಣೇಬೆನ್ನೂರು ಗಡಿ ಕೋಡಿಯಾಲದವರೆಗೆ ಸುಮಾರು 80 ಕಿ.ಮೀ ಉದ್ದದ ಮಾನವ ಸರಪಳಿ ಇದಾಗಿದೆ ಎಂದರು. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು, ಮಹಿಳೆಯರು, ಸ್ವಸಹಾಯ ಸಂಘದವರು ಸೇರಿದಂತೆ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಆಸಕ್ತ ಸಾರ್ವಜನಿಕರು ತಮಗೆ ಹತ್ತಿರವಾಗುವ ಸ್ಥಳದಲ್ಲಿ ಭಾಗಿಯಾಗಬಹುದು. 

ಪ್ರತಿ 100 ಮೀಟರ್ ಗೆ ಒಬ್ಬ ಶಿಕ್ಷಕರು, ಪ್ರತಿ ಕಿಲೋಮೀಟರ್ ಗೆ ಒಬ್ಬರಂತೆ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನೇಮಕ ಮಾಡಲಾಗುತ್ತದೆ. ಸಂಘ, ಸಂಸ್ಥೆಯವರು ಕಲಾವಿದರ ಬಳಕೆ ಮಾಡಿಕೊಳ್ಳಬೇಕೆಂದು ಮಾಡಿದ ಮನವಿಗೆ ಸ್ವಯಂಪ್ರೇರಿತರಾಗಿ ಕಲಾವಿದರೂ ಭಾಗವಹಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು https://www.democracydaykarnataka.in/registration ಲಿಂಕ್ ಮೂಲಕ ನೋಂದಾಯಿಸ ಬಹುದಾಗಿದೆ ಎಂದು ಹೇಳಿದರು. 

ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಆಧಿಕಾರಿ ಸುರೇಶ್ ಬಿ ಇಟ್ಟಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಹೊನ್ನಾಳ್ಳಿ ಉಪವಿಭಾಗಾಧಿಕಾರಿ ಅಭಿಷೇಕ್ ಇತರರಿದ್ದರು.

error: Content is protected !!