ದಾವಣಗೆರೆ, ಸೆ.9- ಗಣೇಶ ಚತುರ್ಥಿ ಆಚರಣೆಯ ಮೂರನೇ ದಿನವಾದ ಸೋಮವಾರ ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಭಾರೀ ಡಿಜೆ ಸದ್ದಿನ ಹಾಡುಗಳೊಂದಿಗೆ ಯುವಕರು ಕುಣಿಯುತ್ತಾ, ಗಣಪತಿ ಬಪ್ಪಾ ಮೋರಿಯಾ ಎಂದು ಕೂಗುತ್ತಾ ವಿಘ್ನ ನಿವಾರಕನನ್ನು ವಿಸರ್ಜಿಸಿದರು. ಸಂಜೆಯಾಗುತ್ತಲೇ ನಗರದ ಪ್ರಮುಖ ರಸ್ತೆಗಳಲ್ಲಿ ಡಿಜೆ ಸದ್ದಿನ ಆರ್ಭಟವೇ ಕೇಳುತ್ತಿತ್ತು. ಮೆರವಣಿಗೆ ಹೋಗುತ್ತಿದ್ದ ಸ್ಥಳಗಳಲ್ಲಿ ವಾಹನ ಸವಾರರು ಪರಿತಪಿಸುತ್ತಿದ್ದರು. ವಿನಾಯಕನ ಮೂರ್ತಿಗಳನ್ನು ವಿಸರ್ಜಿಸಲು ಮಹಾನಗರ ಪಾಲಿಕೆಿಯಿಂದ ನಗರದ ವಿವಿಧೆಡೆ ಟ್ರ್ಯಾಕ್ಟರ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ, ಟ್ರ್ಯಾಕ್ಟರ್‌ನವರು ಸಾರ್ವಜನಿಕರಿಂದ 20 ರಿಂದ 50 ರೂ ವರೆಗೆ ಹಣ ವಸೂಲಿ ಮಾಡುತ್ತಿದ್ದರು.