ಹರಿಹರ ನಗರಸಭೆ ಅಧ್ಯಕ್ಷರಾಗಿ ಕವಿತಾ ಮಾರುತಿ

ಹರಿಹರ ನಗರಸಭೆ ಅಧ್ಯಕ್ಷರಾಗಿ ಕವಿತಾ ಮಾರುತಿ

ಹರಿಹರ, ಸೆ.2- ಇಲ್ಲಿನ ನಗರಸಭೆ ಅಧ್ಯಕ್ಷ ರಾಗಿ ಜೆಡಿಎಸ್ ಕವಿತಾ ಮಾರುತಿ ಬೇಡರ್ ಮತ್ತು ಉಪಾಧ್ಯಕ್ಷರಾಗಿ ಜಂಬಣ್ಣ ಗುತ್ತೂರು   ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ನಗರಸಭೆ ಆವರಣದ ಸದಸ್ಯರ ಕೊಠಡಿ ಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್   ಬೆಳಗ್ಗೆ 10 ಗಂಟೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದರು.    ಅಧ್ಯಕ್ಷ ಸ್ಥಾನಕ್ಕೆ ಕವಿತಾ   ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಂಬಣ್ಣ  ಅವರುಗಳು ಮಾತ್ರ  ನಾಮಪತ್ರ  ಸಲ್ಲಿಸಿದರು. ಇವರ ಹೊರತು ಮತ್ಯಾರು ನಾಮಪತ್ರ ಸಲ್ಲಿ ಸದ ಕಾರಣ ಚುನಾವಣಾ ಅಧಿಕಾರಿ   ಅವಿ ರೋಧ ಆಯ್ಕೆಯನ್ನು  ಘೋಷಣೆ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮಹಿಳಾ ಮೀಸಲು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಸ್ಥಾನದ ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಿತ್ತು.  31 ಜನ  ಸದಸ್ಯರಲ್ಲಿ ಎಸ್ಟಿ ಮಹಿಳಾ ಸದಸ್ಯರಾಗಿ ಕವಿತಾ ಮಾರುತಿ ಮಾತ್ರ  ಆಯ್ಕೆ ಯಾಗಿದ್ದು,  ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವುದಕ್ಕೆ ಅವಕಾಶ ಇಲ್ಲದಂತಾಗಿತ್ತು.  

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಸ್ ವತಿಯಿಂದ ಆರ್.ಸಿ. ಜಾವೇದ್, ಲಕ್ಷ್ಮಿ ಮೋಹನ್, ಜಂಬಣ್ಣ ಗುತ್ತೂರು, ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಅಲಿಂ, ಬಿಜೆಪಿ ಅಶ್ವಿನಿ ಕೃಷ್ಣ ಸೇರಿದಂತೆ  ಹಲವರು ಆಕಾಂಕ್ಷಿತರು ಇದ್ದರೂ ಎಂಬ ಮಾತುಗಳು ಹರಿದಾಡಿದ್ದವು.

ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದಂತೆ ಶಾಸಕ ಬಿ.ಪಿ. ಹರೀಶ್, ಬಿಜೆಪಿ  ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಎಂ‌ ವೀರೇಶ್ ಹನಗವಾಡಿ, ನಗರಸಭೆ ಸದಸ್ಯರು,   ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳು ತಿಳಿಸಿದರು.

ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.  ಅಧ್ಯಕ್ಷ-ಉಪಾಧ್ಯಕ್ಷರು ಜೆಡಿಎಸ್ ಕಚೇರಿಗೆ ತೆರಳಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರಿಗೆ ಶಾಲು, ಹಾರ ಹಾಕಿ ಧನ್ಯವಾದ ಹೇಳಿದರು.

ಈ ವೇಳೆ ನೂತನ ಅಧ್ಯಕ್ಷೆ ಕವಿತಾ ಮಾರುತಿ ಮಾತನಾಡಿ, ನನಗೆ ಅವಿರೋಧವಾಗಿ ಆಯ್ಕೆಯಾಗು ವುದಕ್ಕೆ ಮಾಜಿ ಶಾಸಕ  ಹೆಚ್.ಎಸ್. ಶಿವಶಂಕರ್, ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ನಂದಿಗಾವಿ ಸೇರಿದಂತೆ ನಗರಸಭೆಯ ಸರ್ವ ಸದಸ್ಯರು  ಸಹಕಾರ ನೀಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹರಿಹರವನ್ನು ಮಾದರಿ ನಗರವನ್ನಾಗಿ ಮಾಡುವುದಕ್ಕೆ ಶ್ರಮಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆ ಸದಸ್ಯರಾದ ಎ. ವಾಮನಮೂರ್ತಿ, ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ರತ್ನ ಡಿ. ಉಜ್ಜೇಶ್, ಪಕ್ಕೀರಮ್ಮ,  ನಿಂಬಕ್ಕ ಚಂದಪೂರ್, ಉಷಾ ಮಂಜುನಾಥ್,  ಅಶ್ವಿನಿ ಕೆ.ಜಿ. ಕೃಷ್ಣ, ಪಿ.ಎನ್‌ ವಿರೂಪಾಕ್ಷಪ್ಪ, ಆರ್.ಸಿ. ಜಾವೇದ್, ಎಸ್.ಎಂ‌ ವಸಂತ್, ಸುಮಿತ್ರಾ, ನಾಗರತ್ನ, ಶಮೀನ್ ಭಾನು ದಾದಾಪೀರ್, ಶಹಜಾದ್ ಸನಾವುಲಾ, ರಜನಿಕಾಂತ್, ದಿನೇಶ್ ಬಾಬು, ಹನುಮಂತಪ್ಪ, ಬಾಬುಲಾಲ್, ಅಬ್ದುಲ್ ಅಲಿಂ, ಮುಜಾಮಿಲ್ ಬಿಲ್ಲು, ದಾದಾ ಖಲಂದರ್, ಇಬ್ರಾಹಿಂ,  ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ್, ಸಂತೋಷ ದೊಡ್ಡಮನಿ,  ಮುಖಂಡರಾದ ಜೆಡಿಎಸ್‌ನ ಪಕ್ಷದ  ಜಿ.ನಂಜಪ್ಪ, ಅಡಕಿ ಕುಮಾರ್,  ಫೈನಾನ್ಸ್ ಮಂಜುನಾಥ್, ನಗರಸಭೆ ಸಿಬ್ಬಂದಿ ವರ್ಗದವರಾದ ಶಿವಕುಮಾರ್,  ರವಿಪ್ರಕಾಶ್, ಸಂತೋಷ, ತಿಪ್ಪೇಸ್ವಾಮಿ, ಸಿಪಿಐ ದೇವಾನಂದ್, ಪಿಎಸ್ಐ ವಿಜಯಕುಮಾರ್ ಹಾಗೂ ಇತರರು ಹಾಜರಿದ್ದರು.

error: Content is protected !!