ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿ ಸೋಮನಗೌಡ ಪಾಟೀಲ್

ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿ ಸೋಮನಗೌಡ ಪಾಟೀಲ್

ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾಳಿ ಪಿ.ಎಂ‌. ಪಟ್ಟಣಶೆಟ್ಟಿ

ಹರಿಹರ, ಸೆ.1- ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾಗಿ ಸೋಮನಗೌಡ ಪಾಟೀಲ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾಳಿ ಪಿ.ಎಂ. ಪಟ್ಟಣಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ, ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು, ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ್ ಹೇಳಿದರು.

ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಸಂಘದ ಪದಾಧಿಕಾರಿಗಳ ವತಿಯಿಂದ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ರಾಜ್ಯಾಧ್ಯಕ್ಷರಾಗಿದ್ದ ಜಿ.ಪಿ. ಪಾಟೀಲ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ. ಲೋಕೇಶ್ ರಾಜಿನಾಮೆಯಿಂದ ಈ ಎರಡೂ ಸ್ಥಾನಗಳು ತೆರವಾಗಿದ್ದವು.

ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸೋಮನಗೌಡ ಪಾಟೀಲ್ ಮಾತನಾಡಿ, ರಾಜ್ಯ ಪಂಚಮಸಾಲಿ ಸಂಘ ಹಾಗೂ ಟ್ರಸ್ಟ್‌ಗೆ ಚ್ಯುತಿ ಬಾರದಂತೆ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತೇನೆ.  ಹಲವು ಕಾರಣಗಳಿಂದ ಸಮಾಜದ ಚಟುವಟಿಕೆಗಳಿಂದ ದೂರ ಹೋದವರನ್ನು ಮತ್ತೆ ಕರೆ ತರಲು ಪ್ರಯತ್ನಿಸುತ್ತೇನೆ ಎಂದರು.

ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಬಿ. ಸಿ. ಉಮಾಪತಿ ಮಾತನಾಡಿ, ಪಂಚಮಸಾಲಿ ಸಮಾಜದ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭವನ್ನು ಅಕ್ಟೋಬರ್ 6 ರಂದು ನಡೆಸಲಾಗುವುದು ಎಂದು ತಿಳಿಸಿದರು.    

ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್,  ದಾಸೋಹಕ್ಕೆ ಠೇವಣಿ ಖಾತೆ ತೆರದು 5 ಕೋಟೆ ರೂ. ಠೇವಣಿ ಇರಿಸುವ ಗುರಿ ಹೊಂದಲಾಗಿದೆ. ಈಗಾಗಲೇ  1.5 ಕೋಟಿ ರೂ. ಸಂಗ್ರಹವಾಗಿದೆ ಎಂದರು.

ರಾಜ್ಯಾಧ್ಯಕ್ಷರಾಗಿದ್ದ ಜಿ.ಪಿ. ಪಾಟೀಲ್  ರಾಜಿನಾಮೆ ನೀಡಿರುವುದರಂದ ಬರುವ ಅಕ್ಟೋಬರ್ 6 ರವರೆಗೆ ಹಂಗಾಮಿ ಅಧ್ಯಕ್ಷರಾಗಿ ಹೊನ್ನಾಳಿ ಪಟ್ಟಣಶೆಟ್ಟಿ  ಅಧಿಕಾರವನ್ನು ಹೊಂದಿರುತ್ತಾರೆ ಎಂದು  ಪೀಠದ ಆಡಳಿತ ಅಧಿಕಾರಿ ಡಾ ರಾಜಕುಮಾರ್ ಹೇಳಿದರು.

ಸಮಾಜದ ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು, ಧರ್ಮದರ್ಶಿಗಳಾದ ಚಂದ್ರಶೇಖರ್ ಪೂಜಾರ್, ಪಿ.ಡಿ.ಶಿರೂರು, ದಾವಣಗೆರೆ ರಶ್ಮಿ ನಾಗರಾಜ್ ಕುಂಕೊದ್,  ವಸಂತ ಉಲ್ಲತ್ತಿ ರಾಣೆಬೇನ್ನುರು, ಎನ್.ಆರ್. ರಾಜೇಶ್ವರಯ್ಯ, ಮಹೇಶ್ ಪಾಟೀಲ್, ಕಿರಣ್ ಪಾಟೀಲ್, ಸವಿತಾ ಮಹೇಶ್ ಕೆ,ಶಿವಕುಮಾರ್ ಬಳಿಗಾರ,ಸಿ ದ್ದೇಶ್ ಶಿವಮೊಗ್ಗ, ಷಣ್ಮುಖಪ್ಪ ಚಿತ್ರದುರ್ಗ, ಸಿ.ಸಿ. ಕರಡಿಶೆಟರ್ ವಕೀಲರು ಲಿಂಗಸೂರು, ಬಸವರಾಜ್, ಶಂಕರ್ ಹಾವೇರಿ, ರೇಣುಕಾ, ದೊಡ್ಡಪ್ಪ ಕುಂದಗೋಳ ಕುಷ್ಟೆ ಕೊಪ್ಪಳ , ಮಠದ ಬಂಕಪುರ ಶಿವಣ್ಣ, ಆಶೋಕ ಬೆಂಡಿಗೇರಿ, ಮಲ್ಲಿಕಾರ್ಜುನ ಇತರರು ಹಾಜರಿದ್ದರು.

error: Content is protected !!