ತುಂಗಭದ್ರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹರಿಹರ, ಅ,23- ತುಂಗಭದ್ರಾ ನದಿ ನೀರಿನ ಪಾವಿತ್ರ್ಯತೆ ಮತ್ತು ಮಹತ್ವ ಅರ್ಥ ಮಾಡಿಕೊಂಡರೆ ನಮ್ಮ ಬದುಕು ಸುಂದರವಾಗಿ ಮತ್ತು ಆರೋಗ್ಯವಾಗಿ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ತುಂಗಭದ್ರಾ ನದಿಗೆ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ಬಾಗಿನ ಅರ್ಪಿಸುವ ಸಮಾರಂಭ, ದಾರ್ಶನಿಕರ ಭಾವಚಿತ್ರ ಬಿಡುಗಡೆ, ತುಂಗಾರತಿ ಸ್ಥಳದಲ್ಲಿ ಬೃಂದಾವನ ವನಮಹೋ ತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರು ಇಲ್ಲದೇ ಹೋದರೆ ನಮ್ಮ ನಿತ್ಯದ ಬದುಕು ಉತ್ತಮ ರೀತಿಯಲ್ಲಿ ಸಾಗದು. ನಮ್ಮ ಬದುಕಿನ ಪ್ರಮುಖ ಅಂಗವಾಗಿರುವ ನೀರಿಗೆ ಹೆಚ್ಚು ಮಹತ್ವವನ್ನು ನೀಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತ ನಾಡಿ, ತುಂಗಭದ್ರಾ ನದಿಯ ತಟದಲ್ಲಿ ತುಂಗಾ ರತಿಯ ಧಾರ್ಮಿಕ ಕಾರ್ಯ ಮತ್ತು ಬೃಂದಾವನ ಚಾಲನೆಯನ್ನು ಶ್ರೀಗಳು ಬರುವ ಜನವರಿ 14-15 ರಂದು ನೀಡುವುದಕ್ಕೆ ಮುಂದಾಗಿರುವು ದರಿಂದ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಹೇಳಿದರು.
ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮೀಜಿ ಮಾತನಾಡಿ, ತುಂಗಾರತಿ ಸ್ಥಳವು ಸ್ವರ್ಗದ ವಾತಾವರಣದಲ್ಲಿ ಅಭಿವೃದ್ಧಿ ಆಗಿದ್ದರೆ, ಅದಕ್ಕೆ ಕಾರಣ ಸಂಸದರಾದ ಬಸವರಾಜ್ ಬೊಮ್ಮಾಯಿ ಎಂದರು. ಇಲ್ಲಿನ ಸ್ಥಳವನ್ನು ಎಲ್ಲಾ ಜನಾಂಗದ ಸಿದ್ಧಾಂತದ ಸ್ಥಳವನ್ನಾಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಭೋವಿ ಪೀಠದ ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮಿಗಳು, ರೇಣುಕಾನಂದ ಸ್ವಾಮೀಜಿ, ರಾಘವೇಂದ್ರ ಸ್ವಾಮಿ ಮಠದ ವರಹಾಚಾರ್, ರಾಣೇಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಧರ್ಮದರ್ಶಿ ಬಿ.ಸಿ. ಉಮಾಪತಿ, ಪಿ.ಡಿ. ಶಿರೂರು, ಪ್ರಕಾಶ್ ಪಾಟೀಲ್, ಪಟ್ಟಣ್ಣ ಶೆಟ್ಟಿ, ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಅಚ್ಚುತಗೌಡ, ವಸಂತ ಹುಲ್ಲತ್ತಿ, ರಶ್ಮಿ ನಾಗರಾಜ್ ಕುಂಕೊದ್ ದಾವಣಗೆರೆ, ಸುಷ್ಮ ಪ್ರಕಾಶ್ ಪಾಟೀಲ್, ಧನ್ಯಕುಮಾರ್, ಶ್ರೀನಿವಾಸ್ ರಡ್ಡಿ, ಮೂರ್ತಿಕಾರ್, ಗುತ್ತಿಗೆದಾರ ಶಿವಕುಮಾರ್, ಬಾದಾಮಿ ಜಯಣ್ಣ, ಪುರವಂತರ ಮಂಜುನಾಥ್, ಕರಿಬಸಪ್ಪ ಕಂಚಿಕೇರಿ ಹರಿಹರ, ನಿಂಗರಾಜ್ ದೇವರಬೆಳಕೆರೆ, ಬಾತಿ ರಾಜಣ್ಣ, ಬಂಕಾಪುರ ಶಿವಣ್ಣ, ರೂಪಾ ಕುರವತ್ತಿ, ಗೀತಾ ಕಾಕೋಳ ರಾಣೇಬೆನ್ನೂರು, ಕೋಟೆ ಗದ್ದೆ ರವಿಕುಮಾರ್, ವೀಣಾ ಬೆಳ್ಳೂಡಿ, ವಿಣಾ ಪ್ರಸಾದ್, ಶ್ರೀಶೈಲ, ನಿರಂಜನ್ ದೀಟೂರು , ಚಂದ್ರು ಹೊನ್ನಾಳಿ, ಕೊಟ್ರೇಶ್ ಕೋಡಿಯಾಲ ಹೊಸಪೇಟೆ, ಇತರರು ಹಾಜರಿದ್ದರು