ಎಸ್ಸೆಸ್ ಗುಂಪಿನ ಎಲ್ಲಾ 27 ಜನರು ಜಯ
ದಾವಣಗೆರೆ, ಆ. 25 – ಅಖಿಲ ಭಾರತ ವೀರಶೈವ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಸ್ಥಾನಕ್ಕೆ ಇಂದು ನಡೆದ ಚನಾವಣೆಯಲ್ಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಗುಂಪಿನ ಎಲ್ಲಾ 27 ಜನರು ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯಿಂದ ಸ್ಪರ್ಧೆ ಮಾಡಿದ್ದ ಏಕೈಕ ಅಭ್ಯರ್ಥಿ ಸಂದೀಪ್ ಅಣಬೇರು ಸೇರಿದಂತೆ, ಅವರ ಜೊತೆ ಸ್ಪರ್ಧಿಸಿದ್ದ ಎಲ್ಲಾ 27 ಜನರು ಚುನಾಯಿತಗೊಂಡಿದ್ದಾರೆ.
ಈರೇಶ್ ಎಸ್.ವಿ. (1145), ಅಂಗಡಿ ಶಂಕರಪ್ಪ (1100), ಸಂದೀಪ್ ಆಣಬೇರು (1072), ಉಮೇಶ್ ಬಣಕಾರ್ (1008),ಕರೇಗೌಡ (916), ಪ್ರವೀಣ್ ಹನುಮಗೆಟ್ಟಿ (864), ಶಶಿಕಾಂತ್ ಬಿ. ಪಾಟೀಲ್ (850), ಪೂರ್ಣೇಶ್ ಮೂರ್ತಿ ಎಂ.ಆರ್. (849), ಚಂದ್ರಶೇಖರ್ ಎಸ್.ಶೆಟ್ಟರ್ (841), ಶಂಭುಲಿಂಗಪ್ಪ ನಿಜಪ್ಪ ಚಕ್ಕಡಿ (838), ಚನ್ನಪ್ಪ ಹೆಚ್.ಕೆ. (836), ಗುರಪ್ಪ ಚನ್ನಬಸಪ್ಪ ಮೆಟಗುಡ್ಡ (824),ನಟರಾಜ ಸಾಗರನಹಳ್ಳಿ (819), ಶರಣಪ್ಪ ಬಸಪ್ಪ ಹ್ಯಾಟಿ (796), ಬಸವರಾಜಪ್ಪ (785),ಗಿರೀಶ್ ಕುಮಾರ್ ಡಿ.ವಿ. (7858), ಸಂತೋಷಕುಮಾರ್ ಪಾಟೀಲ್ (784), ನಾಗರಾಜ್ ಎಂ ಗೌರಿ (783), ಮೋಹನ್ ವೀರಭದ್ರಪ್ಪ ಅಸುಂಡಿ (763), ಹರೀಶ್ ಆರಾಧ್ಯ ಆರ್. (752), ರಾಜಶೇಖರ ಬಸವಣ್ಣೆಪ್ಪ ಸೀರಿ (741), ನಂಜುಂಡೇಶ ಎನ್. (728), ಸಂಗನಗೌಡ ಪಾಟೀಲ್ (703),ಸೋಮನಾಥ ರೆಡ್ಡಿ (644), ಮಲ್ಲಿಕಾರ್ಜುನಯ್ಯ ಸಿ. (622), ವಿರೂಪಾಕ್ಷಯ್ಯ ಎಸ್. (606), ವಿಜಯಕುಮಾರ್ ಎ.ಪಿ. (604) ಅವರುಗಳು ಆಯ್ಕೆಯಾಗಿದ್ದಾರೆ.
ಕಾರ್ಯನಿರ್ವಾಹಕ ಸಮಿತಿಯು 41 ಜನರನ್ನು ಒಳಗೊಂಡಿದ್ದು, ಈ ಪೈಕಿ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಆಯ್ಕೆಯಾಗಿದ್ದು, 13 ಜನರು ಮಹಿಳಾ ಸದಸ್ಯರು ನೇಮಕಗೊಳ್ಳಲಿದ್ದಾರೆ. ಉಳಿದಂತೆ 27 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು.
ಈ 27 ಸ್ಥಾನಗಳಿಗೆ ರಾಜ್ಯಾಧ್ಯಂತ ಒಟ್ಟು 57 ಜನರು ಸ್ಪರ್ಧೆ ಮಾಡಿದ್ದರು. ಇವರಲ್ಲಿ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಮತ್ತು ಶಂಕರ್ ಬಿದರಿ ಅವರುಗಳ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎಲ್ಲಾ 27 ಜನರು ಆಯ್ಕೆಯಾಗಿದ್ದಾರೆ.