ಕುರ್ಕಿಯ ಬಳಿ ನಾಲೆ ಸೇತುವೆ ಕುಸಿತ

ಕುರ್ಕಿಯ ಬಳಿ ನಾಲೆ ಸೇತುವೆ ಕುಸಿತ

ಮಾಯಕೊಂಡ, ಆ.20- ಸಮೀಪದ ಕುರ್ಕಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯ ಮುಖ್ಯ ಕಾಲುವೆ ನಿಯಂತ್ರಕದ 3ನೇ ಸೇತುವೆ ಮಂಗಳವಾರ ಕುಸಿದು ಬಿದ್ದಿದೆ.  

ಸೇತುವೆ ತೀರಾ ಹಳೆಯದಾಗಿದ್ದು, ಕಾಲಕಾಲಕ್ಕೆ ದುರಸ್ತಿ ಇಲ್ಲದೇ ಶಿಥಿಲಗೊಂಡಿತ್ತು. ಕಳೆದ ವಾರವಿಡೀ ಸುರಿದ ಧಾರಾಕಾರ ಮಳೆಯಿಂದ ನೀರು ಹರಿವಿನ  ಪ್ರಮಾಣ ತೀವ್ರ ಹೆಚ್ಚಿದ್ದರಿಂದ ಸೇತುವೆ ಕುಸಿದಿದೆ.  ಸೇತುವೆಯ ಮಧ್ಯದಲ್ಲಿ ಸುಮಾರು ಐದಾರು ಅಡಿ ಅಗಲ ಮಣ್ಣು ಕುಸಿದಿದೆ. ವಾಹನ ಸಂಚರಿಸಿದರೆ ಸಂಪೂರ್ಣ ಕುಸಿದು ಬೀಳಬಹುದೆಂದು ಗ್ರಾಮಸ್ಥರು ಸೇತುವೆಗೆ ಅಡ್ಡ ವಾಗಿ ಮಣ್ಣು ರಾಶಿಹಾಕಿ ಜನ ಸಂಚಾರ, ವಾಹನ ಸಂಚಾರ ತಡೆದಿದ್ದಾರೆ.

ಶಾಸಕ ಕೆ.ಎಸ್.ಬಸವಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಕುಸಿದು ಬಿದ್ದ ಸೇತುವೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ದುರಸ್ತಿ ಮಾಡಲು ಸೂಚಿಸಿದರು.

ನೀರಾವರಿ ಇಲಾಖೆಯ ಎಇಇ ಮನೋಜ್, ಇಇ ಮಂಜುನಾಥ್, ಇಂಜಿನಿಯರ್ ಸತೀಶ್, ಗ್ರಾಮಸ್ಥರಾದ ನಂದ್ಯಪ್ಪ, ವೀರೇಂದ್ರ ಚಾರ್ಯ, ಶಿವಜ್ಜ, ಮರುಳಸಿದ್ದಪ್ಪ, ಹಾಲೇಶ್, ಕಾಟೇಹಳ್ಳಿ ಹನುಮಂತಪ್ಪ, ಹಾಲೇಶಪ್ಪ,  ರಾಮಗೊಂಡಹಳ್ಳಿ ಮಲ್ಲಿಕಾರ್ಜುನ್  ಮತ್ತಿತರರಿದ್ದರು.

error: Content is protected !!