ಐರಣಿ ಮಠದ ಸ್ವಾಮೀಜಿ ಶಿಷ್ಯರೆಂದು ಹೇಳಿ ವಂಚನೆ

ಐರಣಿ ಮಠದ ಸ್ವಾಮೀಜಿ ಶಿಷ್ಯರೆಂದು ಹೇಳಿ ವಂಚನೆ

ಐವರ ಬಂಧನ: 2.80 ಲಕ್ಷ ರೂ.ವಶ

ದಾವಣಗೆರೆ, ಆ. 19- ಐರಣಿ ಮಠದ ಸ್ವಾಮೀಜಿಯ ಶಿಷ್ಯರೆಂದು ಹೇಳಿ ವಂಚಿಸಿದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 2.80 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ 15 ಲಕ್ಷ ರೂ. ಮೌಲ್ಯದ 3 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಇಲಿಯಾಜ್, ದಾವಣಗೆರೆ ಜಿಲ್ಲೆಯ ಕಿರಣ್,  ದಾದಾಪೀರ್, ಮಂಜುನಾಥ್ ಹಾಗೂ ಚಿತ್ರದುರ್ಗದ ಮಹಾಂತೇಶ್ ಬಂಧಿತರು. ಇವರು 2023ರ ಅಕ್ಟೋಬರ್ 21ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೆಂಚನಾಳ್ ಗ್ರಾಮದ ಚಮನ್ ಸಾಬ್ ಅವರಿಗೆ ತಾವು ಐರಣಿ ಮಠದ ಸ್ವಾಮೀಜಿ ಶಿಷ್ಯರೆಂದು ಪರಿಚಯಿಸಿಕೊಂಡಿದ್ದರು.

ನಮ್ಮ ಬಳಿ 100 ರೂ. ಮುಖ ಬೆಲೆಯ ನೋಟುಗಳಿದ್ದು ನೀವು 500 ರೂ. ಮುಖ ಬೆಲೆಯ ನೋಟು ನೀಡಿದರೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಬಾಕ್ಸ್ ನೀಡಿ ಮೋಸ ಮಾಡಿದ್ದರು. ಈ ಕುರಿತು ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹರಿಹರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ  ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರು ಪಿ.ಎಸ್.ಐ (ಕಾ&ಸು),  ಚಿದಾನಂದಪ್ಪ ಪಿ.ಎಸ್.ಐ (ತನಿಖೆ) ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ನಾಗರಾಜ. ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಎಲ್.ಡಿ ಹನುಮಂತಪ್ಪ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ,  ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಮಹೇಂದ್ರ, ನಾಗರಾಜ, ಸಿದ್ದಪ್ಪ, ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯವರಾದ ರಾಘವೇಂದ್ರ, ಶಾಂತರಾಜ್ ಒಳಗೊಂಡ ತಂಡವು ಪತ್ತೆ ಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದೆ.

error: Content is protected !!