ಮಲೇಬೆನ್ನೂರು, ಆ. 7- ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಮಂಗಳವಾರ ಹರಿಹರ ತಾಲ್ಲೂಕು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಸಂಘದಿಂದ ಗಂಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಕರಿಬಸಯ್ಯ ಅವರು, ಕಳೆದ ವರ್ಷ ಭದ್ರಾ ಡ್ಯಾಂ ಭರ್ತಿಯಾಗದ ಹಿನ್ನೆಲೆಯಲ್ಲಿ ಅಚ್ಚುಕಟ್ಟಿನ ರೈತರು ಸಂಕಷ್ಟ ಅನುಭವಿಸಬೇಕಾಯಿತು ಎಂದರು.
ಈ ವರ್ಷ ವರುಣನ ಕೃಪೆಯಿಂದ ಭದ್ರಾ ಡ್ಯಾಂ ಜುಲೈ ತಿಂಗಳಲ್ಲೇ ಪೂರ್ತಿಯಾಗಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ರೈತರು ನೀರನ್ನು ಮಿತವಾಗಿ ಬಳಸುವ ಮೂಲಕ ಬೇಸಿಗೆ ಬೆಳೆಯನ್ನೂ ಸಮೃದ್ಧಿಯಾಗಿ ಬೆಳೆಯಲೆಂದು ಮತ್ತು ಭದ್ರೆ ಪ್ರತಿ ವರ್ಷ ಭರ್ತಿಯಾಗುವಂತೆ ಪ್ರಾರ್ಥಿಸಿದ್ದೇವೆ ಎಂದು ಕರಿಬಸಯ್ಯ ಅವರು ಹೇಳಿದರು.
ಸಂಘದ ಗೌರವಾಧ್ಯಕ್ಷರಾದ ಹಳ್ಳಿಹಾಳ್ ಹೆಚ್.ಟಿ. ಶಾಂತನಗೌಡ, ಕಾರ್ಯದರ್ಶಿ ಪೂಜಾರ್ ರಂಗನಾಥ್, ಖಜಾಂಚಿ ಕುಂಬಳೂರಿನ ಎಸ್.ಜಿ. ಯೋಗೇಂದ್ರಪ್ಪ, ಮಾರಾಟಗಾರರಾದ ಕುಂಬಳೂರಿನ
ಬಿ. ಕೆಂಪೇಗೌಡ, ವೇದಮೂರ್ತಿ,
ವೈ. ಪ್ರಶಾಂತ್, ಎಂ. ವಾಸುದೇವ ಮೂರ್ತಿ, ಮಲೇಬೆನ್ನೂರಿನ ಎಳೆಹೊಳೆ ಕುಮಾರ್, ರಾಜು, ಮಂಜುನಾಥ್, ಜಿಗಳಿಯ ಗೌಡ್ರ ಬಸವರಾಜಪ್ಪ, ಹೊಳೆಸಿರಿಗೆರೆಯ ಕೆ. ರುದ್ರೇಶ್, ಮಹೇಶ್, ಮೂಗಿನಗೊಂದಿ ಶಿವು, ಪಾಳ್ಯದ ಹನುಮಗೌಡ, ಹರಳಹಳ್ಳಿ ರಾಜಪ್ಪ, ಹಾಲಿವಾಣದ ಲೋಹಿತ್, ಹರಿಹರದ ಅನಿಲ್, ಗದಿಗೆಪ್ಪ, ಕೊಂಡಜ್ಜಿ ವಿಜಿ, ನಂದಿತಾವರೆಯ ಭೀಮೇಶ್, ನಿಟ್ಟೂರು ಹರೀಶ್, ಗೋವಿನಹಾಳ್ ರವದಿಗೌಡ್ರ ನಾಗರಾಜ್ ಮತ್ತು ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಮುದೇಗೌಡ್ರ ಗಿರೀಶ್, ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಪುರಸಭೆ ಸದಸ್ಯ ಬಿ. ವೀರಯ್ಯ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.