ದಾವಣಗೆರೆ, ಆ. 2-ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ತಮ್ಮ ಕಚೇರಿಯಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ, ತಕ್ಷಣವೇ ಅಧಿಕಾರಿಗಳ ಸಭೆ ಕರೆದು, ಎಲ್ಲಾ ಅಧಿಕಾರಿಗಳಿಗೂ ಸಾರ್ವಜನಿಕರನ್ನು ಅಲೆದಾಡಿಸದೆ ಕೂಡಲೇ ಕೆಲಸ ಮಾಡಿಕೊಡಬೇಕಾಗಿ ನಿರ್ದೇಶಿಸಿದರು. ಈ ಸಂದರ್ಭದಲ್ಲಿ ಆಯುಕ್ತರಾದ ತಿಮ್ಮೇಶ್ ಹುಲ್ಲುಮನಿ, ಪ್ರಾಧಿಕಾರದ ಸದಸ್ಯರಾದ ಎಂ. ಮಂಜುನಾಥ್, ಶ್ರೀಮತಿ ಎಂ.ಆರ್. ವಾಣಿ, ಜಬ್ಬಾರ್ ಖಾನ್ ಇನ್ನು ಮುಂತಾದವರು ಇದ್ದರು.
January 10, 2025