ದಾವಣಗೆರೆ,ಜು.30-ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರ ನೇತೃತ್ವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿಯಿಂದ ಇಂದು ಬಾಗಿನ ಅರ್ಪಿಸಲಾಯಿತು.
ರೈತ ಸಮುದಾಯಕ್ಕೆ ಒಳಿತಾಗಲಿ ಮತ್ತು ಪ್ರತಿ ವರ್ಷವೂ ಭದ್ರಾ ಜಲಾಶಯವು ಇದೇ ರೀತಿ ಮೈದುಂಬಿಕೊಳ್ಳಲಿ ಎಂದು ಸಂಕಲ್ಪಿಸಿ ಜಿ.ಎಂ.ಸಿದ್ದೇಶ್ವರ ಮತ್ತು ಶ್ರೀಮತಿ ಗಾಯತ್ರಿ ದಂಪತಿ, ಈ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಭದ್ರೆಗೆ ವಿಶೇಷ ಪೂಜೆಯೊಂದಿಗೆ ಬಾಗಿನ ಸಮರ್ಪಿಸಿದರು.
ಶಾಸಕ ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರುಗಳಾದ ಎಸ್.ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಉಪ ಮೇಯರ್ ಯಶೋಧ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮುಖಂಡರುಗಳಾದ ಎಚ್.ಎನ್. ಶಿವಕುಮಾರ್, ಜಿ.ಎಸ್. ಅನಿತ್ ಕುಮಾರ್, ಯಶವಂತರಾವ್ ಜಾಧವ್, ಎಸ್.ಎಂ. ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಶಾಂತರಾಜ್ ಪಾಟೀಲ್, ಕೊಳೇನಹಳ್ಳಿ ಸತೀಶ್, ಚನ್ನಪ್ಪ, ಮಂಡಲ ಅಧ್ಯಕ್ಷ ಸಂಗನಗೌಡ್ರು, ಶ್ಯಾಗಲೆ ದೇವೇಂದ್ರಪ್ಪ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.