ದಾವಣಗೆರೆ, ಜು.24- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯವನ್ನು ಕಡೆಗಣಿಸ ಲಾಗಿದೆ ಎಂದು ಆರೋಪಿಸಿ ನವದೆಹಲಿ ಯಲ್ಲಿ ರಾಜ್ಯ ಸಂಸತ್ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು.
30 ಸಾವಿರ ಕೋಟಿ ಸುರಂಗ ಮಾರ್ಗ ರಸ್ತೆ ಯೋಜನೆಗೆ ಭಾಗಶಃ ಹಣ ಬಿಡುಗಡೆ ಸೇರಿದಂತೆ ಬೆಂಗಳೂರಿಗೆ ವಿಶೇಷ ಮೂಲ ಸೌಕರ್ಯ ಪ್ಯಾಕೇಜ್‌ಗಾಗಿ ಕರ್ನಾಟಕದ ಮನವಿಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭದ್ರಾ ಮೇಲ್ದಂಡೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 5,300 ಕೋಟಿ ಬಾಕಿ ಇದೆ. ಅದರ ಬಿಡುಗಡೆ ಬಗ್ಗೆ ಆಯವ್ಯಯದಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ರಾಯ ಚೂರಿನಲ್ಲಿ ಎಐಐಎಂಎಸ್ ಸ್ಥಾಪನೆಯ ಘೋಷಣೆ ಇಲ್ಲ. ಕೇಂದ್ರ ಸರ್ಕಾರವು ಕರ್ನಾ ಟಕಕ್ಕೆ ಬಜೆಟ್ ನಲ್ಲಿ ಚೊಂಬು ನೀಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದಲ್ಲಿ ಹೊಸ ಹೆದ್ದಾರಿ ಯೋಜನೆ ಗಳಾದ ಗುಂಡ್ಲುಪೇಟೆ, ನಂಜನಗೂಡು ಮತ್ತು ಕೊಳ್ಳೇಗಾಲ-ಕೇರಳವನ್ನು ಸಂಪರ್ಕಿ ಸುವ ಎನ್‌ಎಚ್ 766 ರ ಮೈಸೂರು ಅಗಲೀಕರಣ ಯೋಜನೆಯ ಉಲ್ಲೇಖವಿಲ್ಲ. ಅದೇ ರೀತಿ, ಕರ್ನಾಟಕದ ಕನಕಪುರ-ತಮಿಳುನಾಡಿಗೆ ಮಳವಳ್ಳಿ ಮೂಲಕ ಸಂಪರ್ಕಿಸುವ ಕುತೂಹಲದಿಂದ ಕಾಯುತ್ತಿರುವ ಎನ್ ಹೆಚ್ -948 ಯೋಜನೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ದೂರಿದರು.
ರಾಜ್ಯದ ಕಾಂಗ್ರೆಸ್ ಸಂಸತ್ ಸದಸ್ಯರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶ್ರೇಯಸ್ ಪಟೇಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.