ಮಳೆಗಾಲ ಬಂತೆಂದರೆ ಮನೆಯ ಮೂಲೆಯಲ್ಲಿದ್ದ ಛತ್ರಿಗಳು ಧೂಳು ಕೊಡವಿಕೊಂಡು ಅರಳುತ್ತವೆ. ಇತ್ತ ರಸ್ತೆ ಬದಿಯಲ್ಲೂ ಬಣ್ಣದ ಕೊಡೆಗಳು ಆಕರ್ಷಿಸುತ್ತವೆ. ಮಳೆಗೆ ತಾ ನೆನೆದು, ಅನ್ಯರಿಗೆ ನೆರಳಾಗಿ, ತಲೆಗೆ ಸೂರಾಗಿ ನಿಲ್ಲುವ ಈ ಛತ್ರಿಗೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಬೇಡಿಕೆ ಹೆಚ್ಚಾಗಿದೆ. ದಾವಣಗೆರೆಯ ಪ್ರಮುಖ ವೃತ್ತ, ರಸ್ತೆಗಳಲ್ಲಿ ಮಾರಾಟ ಗರಿಗೆದರಿದೆ.
January 4, 2025