ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ
ಬೆಂಗಳೂರು, ಜು. 21 – ದಾವಣಗೆರೆ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಮತ್ತು ಶ್ರೀಶೈಲ ಪೀಠದ ಭಕ್ತರ ಕೋರಿಕೆಯ ಮೇರೆಗೆ ಶೀಘ್ರವಾಗಿ ದಾವಣಗೆರೆ ಮತ್ತು ಮಾರ್ಕಪುರ ರಸ್ತೆಯ ಮುಖಾಂತರ ರೈಲು ಸಂಚಾರ ಪ್ರಾರಂಭ ಮಾಡಲು ಕೇಂದ್ರ ರೈಲ್ವೆ ಸಚಿವರು ಮತ್ತು ರೈಲ್ವೆ ಉನ್ನತ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ, ರೈಲ್ವೆ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಬೆಂಗಳೂರು ನಗರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀಶೈಲ ಜಗದ್ಗುರುಗಳವರ ಇಷ್ಟಲಿಂಗ ಪೂಜೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ದಾವಣಗೆರೆ ಹಾಗು ಶ್ರೀಶೈಲದ ನಡುವಿನ ರೈಲಿನ ಸಂಪರ್ಕವನ್ನು ಮಾಡಲು ಸದ್ಯ ಈಗ ಶ್ರೀಶೈಲಕ್ಕೆ ಸಮೀಪವಿರುವ ಮಾರ್ಕಪುರ ರಸ್ತೆಯವರೆಗೂ ಮಾತ್ರ ಅವಕಾಶವಿದೆ. ಹಾಗಾಗಿ ದಾವಣಗೆರೆಯಿಂದ ನೇರವಾಗಿ ಮಾರ್ಕಪುರ ರಸ್ತೆ ಮುಖಾಂತರ ರೈಲಿನ ಸಂಚಾರ ಆರಂಭವಾದರೆ ಜನರಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಮಾಜದ ಮುಖಂಡರಾದ ಬಿ.ಎಸ್.ಪರಮಶಿವಯ್ಯ, ಗುರುಸ್ವಾಮಿ, ಆರ್.ಟಿ ಪ್ರಶಾಂತ್, ಪಾಲ್ಗೊಂಡಿದ್ದರು.