ಹರಿಹರ ತಾಲ್ಲೂಕಿನ ತುಂಗಭದ್ರಾ ನದಿ ಪಾತ್ರದ ಹಳ್ಳಿಗಳಲ್ಲಿ ಮುಂಗಾರು ಹಂಗಾಮಿನ ಭತ್ತದ ನಾಟಿ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಭಾನುವಾರ ಕೆ ಎನ್ ಹಳ್ಳಿ -ವಾಸನ ನಡುವೆ ಗದ್ದೆಗಳಲ್ಲಿ ರೈತರು ಜಿಟಿಜಿಟಿ ಮಳೆಯ ನಡುವೆಯೂ ನಾಟಿ ಮಾಡುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು. ದೇವರಬೆಳಕೆರೆ ಪಿಕಪ್ ಡ್ಯಾಮ್ ವ್ಯಾಪ್ತಿಯ ಜರೆಕಟ್ಟೆ, ಮುದಹದಡಿ, ದೇವರಬೆಳಕೆರೆ, ಕುಣೆಬೆಳಕೆರೆ, ಬೂದಿಹಾಳ್, ಸಂಕ್ಲೀಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಸಹ ಭತ್ತದ ನಾಟಿ ಆರಂಭಿಸಿದ್ದಾರೆ.
January 10, 2025