ತರಳಬಾಳು ಬಡಾವಣೆಯಲ್ಲಿ ತಪ್ಪಿದ ಅನಾಹುತ !
ದಾವಣಗೆರೆ, ಜು. 16 – ಶಿಥಿಲ ವ್ಯವಸ್ಥೆಯಲ್ಲಿದ್ದ ಬೃಹತ್ ಗಾತ್ರದ ಹಳೆಯ ಮರದ ಕೊಂಬೆಗಳು ಇದ್ದಕ್ಕಿದ್ದಂತೆ ನೆಲ ಕ್ಕುರುಳಿ ಬಿದ್ದ ಘಟನೆ ನಿನ್ನೆ ಸೋಮವಾರ ಬೆಳಿಗ್ಗೆ ನಗರದ ತರಳಬಾಳು ಬಡಾವಣೆಯಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಮಳೆ ಬಿಟ್ಟು ಬಿಟ್ಟು ಸುರಿದಿದೆ. ಮೊದಲೇ ಶಿಥಿಲ ವ್ಯವಸ್ಥೆಯಲ್ಲಿದ್ದ ಬೃಹತ್ ಗಾತ್ರದ ಮರ ಮಳೆಗೆ ಇನ್ನಷ್ಟು ನೆನೆದ ಪರಿಣಾಮ ಮರದ ಕೊಂಬೆಗಳು ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ವಿದ್ಯುತ್ ಕಂಬ, ಒಂದು
ಕಾರು, ಮನೆಯ ಮೇಲೆ ಬಿದ್ದಿದ್ದು, ವಿದ್ಯುತ್ ಕಡಿತಗೊಂಡು ಕಾರೊಂದು ಜಖಂಗೊಂಡಿದ್ದು, ಮನೆಯ ಗೇಟುಗಳು ಮುರಿದಿವೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.
ತರಳಬಾಳು ಬಡಾವಣೆ ಜನನಿಬಿಡ ಪ್ರದೇಶ ವಾಗಿದ್ದು, ಶಾಲೆಗೆ ಹೋಗುವ ಮಕ್ಕಳು, ಹಿರಿಯರು ಓಡಾಡುತ್ತಿ ರುತ್ತಾರೆ. ತುಂಬಾ ಹಳೆಯ ಮರಗಳಾ ಗಿದ್ದು, ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಗಳನ್ನು ತೆರವು ಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಈಗ ಇದ್ದಕ್ಕಿದ್ದಂತೆ ಮರಗಳ ಕೊಂಬೆಗಳು ಮುರಿದು ಬಿದ್ದಿವೆ. ಯಾರಾದರೂ ಮಕ್ಕಳ ಮೇಲೆ ಅಥವಾ ಹಿರಿಯರ ಮೇಲೆ ಬಿದ್ದಿದ್ದರೆ ಏನು ಗತಿ ಎಂದು ಆತಂಕವನ್ನು ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿ, ನಿವೃತ್ತ ಪ್ರಾಚಾರ್ಯರಾದ ದೇವೇಂದ್ರಪ್ಪ ಅವರು, ಇನ್ನೆರಡು ಶಿಥಿಲ ವ್ಯವಸ್ಥೆಯಲ್ಲಿರುವ ಹಳೆಯ ಮರಗಳಿದ್ದು, ಅಧಿಕಾರಿಗಳು ಆದಷ್ಟು ಬೇಗ ತೆರವುಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.