ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ

ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ

ಜಟಿ ಜಿಟಿ ಮಳೆಯಲ್ಲೂ ಜಗನ್ನಾಥ ರಥಯಾತ್ರೆ

ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್‌) ವತಿಯಿಂದ 3ನೇ ವರ್ಷದ ಪುರಿ ಶ್ರೀ ಜಗನ್ನಾಥ ರಥಯಾತ್ರೆಯು ಸೋಮವಾರ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದಾವಣಗೆರೆ, ಜು. 8- ಎಲ್ಲೆಡೆ ಜಿಟಿ ಜಿಟಿ ಮಳೆ. ಇದನ್ನೂ ಲೆಕ್ಕಿಸದೇ `ಹರೇ ರಾಮ………, ಹರೇ ಕೃಷ್ಣ’ ಎನ್ನುವ ರಾಮ – ಕೃಷ್ಣರ ಭಜನೆ, ಭಕ್ತಿಯಲ್ಲಿ ಮಿಂದೆಂದ ಭಕ್ತರು. ಇವು ಕಂಡು ಬಂದದ್ದು ಇಸ್ಕಾನ್ ಸಂಸ್ಥೆಯ ವತಿಯಿಂದ ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಪುರಿ ಜಗನ್ನಾಥ ರಥ ಎಳೆಯುವ ಸಂದರ್ಭದಲ್ಲಿ.

ಹಿರಿಯರು, ಮಹಿಳೆಯರು, ಪುರುಷರು, ಯುವಕ-ಯುವತಿಯರು, ಮಕ್ಕಳು ಸೇರಿದಂತೆ ನೆರೆದಿದ್ದ ಭಕ್ತ ಸಮೂಹ ರಾಮ-ಕೃಷ್ಣರ ಭಜನೆ ಮಾಡುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿದ್ದು ವಿಶೇಷವಾಗಿತ್ತು.

ದಾವಣಗೆರೆ ಇಸ್ಕಾನ್ ಸಂಸ್ಥೆ ವತಿಯಿಂದ ಮೂರನೇ ವರ್ಷದ ಶ್ರೀ ಪುರಿ ಜಗನ್ನಾಥ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಿಂದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದ ಆವರಣದವರೆಗೆ ಭಕ್ತರು ರಥ ಎಳೆಯುವ ಮೂಲಕ ಭಗವಂತನ ಕೃಪೆಗೆ ಪಾತ್ರರಾದರು.

ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಸಹ ಯಾವುದನ್ನು ಲೆಕ್ಕಿಸದೇ ಸಾವಿರಾರು ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡು ರಾಮ-ಕೃಷ್ಣರ ಭಜನೆ ಮಾಡುವ ಮೂಲಕ ಭಕ್ತಿಯಿಂದ ರಥ ಎಳೆದರು.

ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ - Janathavani

ಇದೇ ವೇಳೆ ದಾವಣಗೆರೆ ಇಸ್ಕಾನ್ ಸಂಸ್ಥೆ ಮುಖ್ಯಸ್ಥ ಅವಧೂತ ಚಂದ್ರಹಾಸ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯ ಹಿನ್ನೆಲೆಯಲ್ಲಿ ಅನೇಕ ರಥ ಯಾತ್ರೆಗಳು ನಡೆಯುತ್ತವೆ. ಎಲ್ಲಾ ರಥೋತ್ಸವಗಳಲ್ಲಿ ಉತ್ಸವ ಮೂರ್ತಿಗಳನ್ನು ರಥದಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಆದರೆ ಶ್ರೀ ಜಗನ್ನಾಥ ಸ್ವಾಮಿ ರಥ ಯಾತ್ರೆಯಲ್ಲಿ ಮೂಲ ವಿಗ್ರಹಗಳನ್ನು ಮೆರವಣಿಗೆ ಮಾಡುವುದೇ ವಿಶೇಷ ಎಂದರು.

ಪ್ರತಿ ವರ್ಷ ಮಳೆ, ಬಿಸಿಲು ಏನೇ ಇರಲಿ ರಥ ಯಾತ್ರೆ ನಿಲ್ಲದೇ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಜಗನ್ನಾಥನ ಅನುಗ್ರಹ ದೊರಕುತ್ತಿದೆ. ಹೃದಯ ಮಂದಿರದಲ್ಲಿ ಭಗವಂತ ಜಗನ್ನಾಥನನ್ನು ಸ್ಥಾಪಿಸಿ ರಥ ಯಾತ್ರೆಯನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸೋಣ ಎಂದು ಹೇಳಿದರು.

ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ಆರಂಭವಾದ ರಥ ಯಾತ್ರೆಯು ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ವೀರಮದಕರಿ ನಾಯಕ ವೃತ್ತ, ಅರುಣ ಸರ್ಕಲ್, ಆರ್‌.ಹೆಚ್. ಛತ್ರ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ, ಸಿ.ಜಿ.ಜಿಲ್ಲಾಸ್ಪತ್ರೆ ಮೂಲಕ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದ ಆವರಣ ತಲುಪಿತು.

ರಥ ಯಾತ್ರೆಯಲ್ಲಿ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಸದಸ್ಯ ವೀರೇಶ್ ಪೈಲ್ವಾನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ನಂತರ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜೆ ವಿಧಿ-ವಿಧಾನಗಳು, ಭರತನಾಟ್ಯ, ಸಂಗೀತ ಕಾರ್ಯಕ್ರಮಗಳು ಜರುಗಿದವು.

error: Content is protected !!