21 ಐಎಎಸ್ ಅಧಿಕಾರಿಗಳ ವರ್ಗಾವಣೆ

21 ಐಎಎಸ್ ಅಧಿಕಾರಿಗಳ ವರ್ಗಾವಣೆ

ನೂತನ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ಸಚಿವರು ನೂತನ ಜಿಲ್ಲಾಧಿಕಾರಿಗಳಿಗೆ ಶುಭ ಹಾರೈಸಿದರು.

21 ಐಎಎಸ್ ಅಧಿಕಾರಿಗಳ ವರ್ಗಾವಣೆ - Janathavaniದಾವಣಗೆರೆ ನೂತನ ಜಿಲ್ಲಾಧಿಕಾರಿಯಾಗಿ ಜಿ.ಎಂ. ಗಂಗಾಧರಸ್ವಾಮಿ

ಬೆಂಗಳೂರು, ಜು. 5 – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರ ತಕ್ಷಣ ದಿಂದಲೇ ಜಾರಿಗೆ ಬರುವಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ದಾವಣಗೆರೆ ಜಿಲ್ಲಾಧಿಕಾರಿಯಾಗಿ ಡಾ. ಜಿ.ಎಂ. ಗಂಗಾಧರಸ್ವಾಮಿ ಸೇರಿದಂತೆ ನೂತನ ಜಾಗಗಳಿಗೆ ವರ್ಗಾವಣೆಗೊಂಡಿರುವ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಹಾಯಕ ಕಾರ್ಯದರ್ಶಿ ಎಸ್.ಯುಕೇಶ್ ಕುಮಾರ್ ನಿರ್ದೇಶನ ಹೊರಡಿಸಿದ್ದಾರೆ. 

ಇದುವರೆಗೂ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಎಂ.ವಿ. ವೆಂಕಟೇಶ್ ಅವರಿಗೆ ವರ್ಗಾವಣೆ ಮಾಡಲಾಗಿದೆಯಾದರೂ, ಸ್ಥಳ ನಿಯೋಜನೆ ಮಾಡಿಲ್ಲ. ಗಂಗಾಧರಸ್ವಾಮಿ ಅವರು ಕೃಷಿ ಇಲಾಖೆಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿದ್ದರು.

ವರ್ಗಾವಣೆಗೊಂಡ ಇತರೆ ಐಎಎಸ್ ಅಧಿಕಾರಿ ಗಳು – ಡಾ.ಕೆ.ವಿ.ರಾಜೇಂದ್ರ ಪ್ರವಾಸೋ ದ್ಯಮ ಇಲಾಖೆ ನಿರ್ದೇಶಕ, ಡಾ.ರಾಮ್‍ಪ್ರಸಾದ್ ಮನೋಹರ್ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ನಿತೇಶ್ ಪಾಟೀಲ್ ಎಂಎಸ್‍ಎಂಇ ನಿರ್ದೇಶಕ, ಡಾ.ಅರುಂಧತಿ ಚಂದ್ರಶೇಖರ್ ಪಂಚಾಯತ್ ರಾಜ್ ಆಯುಕ್ತೆ, ಎಲ್.ಚಂದ್ರಶೇಖರ ನಾಯಕ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ.

ವಿಜಯ ಮಹಾಂತೇಶ್ ಬಿ.ದಾನಮ್ಮನವರ್ ಹಾವೇರಿ ಜಿಲ್ಲಾಧಿಕಾರಿ, ಗೋವಿಂದ ರೆಡ್ಡಿ ಗದಗ ಜಿಲ್ಲಾಧಿಕಾರಿ, ರಘುನಂದನ್ ಮೂರ್ತಿ ಖಜಾನೆ ಆಯುಕ್ತ (ಬೆಂಗಳೂರು), ಡಾ.ಗಂಗಾಧರಸ್ವಾಮಿ ದಾವಣಗೆರೆ ಜಿಲ್ಲಾಧಿಕಾರಿ, ಕೆ.ನಿತೀಶ್ ರಾಯಚೂರು ಜಿಲ್ಲಾಧಿಕಾರಿ, ಮೊಹಮ್ಮದ್ ರೋಶನ್ ಬೆಳಗಾವಿ ಜಿಲ್ಲಾಧಿಕಾರಿ, ಶಿಲ್ಪಾ ಶರ್ಮಾ ಬೀದರ್ ಜಿಲ್ಲಾಧಿಕಾರಿ.  ದಿಲೇಶ್ ಸಸಿ ಇ-ಆಡಳಿತ ಕೇಂದ್ರ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ (ಬೆಂಗಳೂರು), ಲೋಖಂಡೆ ಸ್ನೇಹಲ್ ಸುಧಾಕರ್ ಕರ್ನಾಟಕ ವಿದ್ಯುತ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ, ಶ್ರೀರೂಪಾ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ, ಜಿಟ್ಟೆ ಮಾಧವ ವಿಠಲ ರಾವ್ ಬಾಗಲಕೋಟೆ ಪುನರ್ವಸತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ, ಎನ್.ಹೇಮಂತ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ.  

ನೊಂಗ್ಲಜ್ ಮೊಹಮದ್ ಅಲಿ ಅಕ್ರಂ ಶಾ ಹೊಸಪೇಟೆ ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ, ಕೆ.ಜ್ಯೋತಿ ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕಿ, ಸಿ.ಎನ್.ಶ್ರೀಧರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೋಷಿಯಲ್ ಆಡಿಟ್ ನಿರ್ದೇಶಕ.

error: Content is protected !!