ಮಲೆನಾಡಿನಲ್ಲಿ ಮಳೆ ಪ್ರಾರಂಭ ಭದ್ರಾ ಒಳಹರಿವು ಹೆಚ್ಚಳ

ಮಲೆನಾಡಿನಲ್ಲಿ ಮಳೆ ಪ್ರಾರಂಭ ಭದ್ರಾ ಒಳಹರಿವು ಹೆಚ್ಚಳ

ಶಿವಮೊಗ್ಗ, ಜೂ.27- ಮಲೆನಾಡಿನಲ್ಲಿ ಮುಂಗಾರು ಮಳೆ ಪ್ರಾರಂಭ ವಾಗಿದ್ದು, ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಬುಧವಾರ 2276 ಕ್ಯೂಸೆಕ್ಸ್ ಇದ್ದ ಒಳಹರಿವು ಗುರುವಾರ 4082 ಕ್ಯೂಸೆಕ್ಸ್‌ಗೆ ಏರಿಕೆ ಕಂಡಿದೆ. ಜಲಾಶಯದ ನೀರಿನಮಟ್ಟ 120 ಅಡಿ 9 ಇಂಚು ಆಗಿದ್ದು, ಕಳೆದ ವರ್ಷ ಜಲಾಶಯದಲ್ಲಿ ಈ ದಿನ 137 ಅಡಿ ನೀರಿತ್ತು.

ಗಾಜನೂರಿನ ತುಂಗಾ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ತುಂಗಭದ್ರಾ ನದಿಗೆ ನೀರು ಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವುದಕ್ಕೆ ಭದ್ರಾ ಅಚ್ಚುಕಟ್ಟಿನ ಜನ ಸಂತಸಗೊಂಡಿದ್ದಾರೆ.

error: Content is protected !!