ರಾಣೇಬೆನ್ನೂರು, ಜೂ.26- ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಇಂದು ನಡೆದ ಜನಸ್ಪಂದನ ಕಾರ್ಯ ಕ್ರಮಕ್ಕೆ ಆಗಮಿಸಿದ್ದ ಗ್ರಾಮೀಣ ಭಾಗದ ನೂರಾರು ಜನರು ತಮ್ಮ ವೈಯಕ್ತಿಕ ಹಾಗೂ ಸಾರ್ವತ್ರಿಕ ಅಹವಾಲುಗಳನ್ನು ಅರ್ಜಿ ಮೂಲಕ ಸಲ್ಲಿಸಿದರು.
ಕೆಎಸ್ಆರ್ಟಿಸಿ, ನಗರಸಭೆ, ಅಬಕಾರಿ, ತೋಟಗಾರಿಕೆ, ಆರೋಗ್ಯ, ತುಂಗಾ ಮೇಲ್ದಂಡೆ, ಕೆಇಬಿ ಮುಂತಾದ ಇಲಾಖೆಗೆ ಬಂದ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು, ಸಂಬಂಧಿಸಿದ ಇಲಾಖೆ ಅಧಿಕಾರಿಯೊಂದಿಗೆ ಚರ್ಚಿಸಿ, ತುರ್ತಾಗಿ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ದಾನ ಕೊಟ್ಟವರ ಹೆಸರು ಬಿಟ್ಟು, ಖರೀದಿಗೆ ಕೊಟ್ಟವರ ಹೆಸರು ಆಸ್ಪತ್ರೆಗೆ ಬರೆಯಿಸಿದ್ದು, ಸರ್ಕಾರದ ಜಾಗೆಯಲ್ಲಿ ಕಟ್ಟಿಕೊಂಡ ಮನೆಯನ್ನು ತಮ್ಮ ಹೆಸರಿಗೆ ಖಾತೆ ಮಾಡುವಂತದ್ದು, ತಾಂಡಾವನ್ನು ಕಂದಾಯ ಗ್ರಾಮ ಮಾಡುವುದು, ನಗರ ದಲ್ಲಿ ಒತ್ತುವರಿ ಮಾಡಿಕೊಂಡಿರುವ ಬಂಗಿ ರಸ್ತೆಗಳನ್ನು ತೆರವು ಗೊಳಿಸುವುದು, ಅಕ್ರಮ ಲೇಔಟ್ ನಿರ್ಮಾಣ ತಡೆಯುವುದು, ತರೇದಹಳ್ಳಿ ಮಧ್ಯದಲ್ಲಿರುವ ಗೋಲ್ಡನ್ ಹ್ಯಾಚರೀಸ್ ಗ್ರೀನ್ ಎನರ್ಜಿ ಬಯೋ ರಿಫೈನ್ ರೈಸ್ ಕಂಪನಿಯಿಂದ ಕುಮದ್ವತಿ ನದಿಗೆ ರಾಸಾಯನಿಕಯುಕ್ತ ನೀರು ಬಿಡುವು ದನ್ನು ತಡೆಯುವುದು ಮುಂತಾದ ಬೇಡಿಕೆ ಗಳು ಬಂದಿದ್ದವು. ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.