ಪುಷ್ಪಕ್ ರಾಕೆಟ್‌ ಸುರಕ್ಷಿತ ಲ್ಯಾಂಡಿಂಗ್‍ನಲ್ಲಿ ಸಾಧನೆ

ಪುಷ್ಪಕ್ ರಾಕೆಟ್‌ ಸುರಕ್ಷಿತ ಲ್ಯಾಂಡಿಂಗ್‍ನಲ್ಲಿ ಸಾಧನೆ

ನಾಯಕನಹಟ್ಟಿ ಹೋಬಳಿಯಲ್ಲಿ ನಡೆದ ಇಸ್ರೋದ ಪ್ರಯೋಗ ಯಶಸ್ವಿ

ಚಿತ್ರದುರ್ಗ, ಜೂ. 23 – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿಬ್ಬಂದಿಗಳಿಲ್ಲದ, ಮರುಬಳಕೆ ಮಾಡಬಹುದಾದ ಪುಷ್ಪಕ್‌ ಉಡಾವಣಾ ವಾಹನವನ್ನು ಸುರಕ್ಷಿತ ಲ್ಯಾಂಡಿಂಗ್‌ ಮಾಡುವ ಮೂಲಕ ಅಪರೂಪದ ಗೆಲುವನ್ನು ಸಾಧಿಸಿದೆ. 

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಬಳಿ ಇರುವ ಡಿಆರ್‌ಡಿಒ ಟೆಸ್ಟ್ವರೇಂಜ್-2 ಆವರಣದಲ್ಲಿ ಮಹತ್ವದ ಪ್ರಯೋಗ ನಡೆಸಿದ ಇಸ್ರೋ ಮರು ಬಳಕೆ ಬಾಹ್ಯಾಕಾಶ ವಾಹನ(ಆರ್‌ಎಲ್‌ವಿ)ದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. 

ಬೆಳಿಗ್ಗೆ 7 ಗಂಟೆಗೆ ಪುಷ್ಪಕ್ ಗಗನ ನೌಕೆ ಆಗಸಕ್ಕೆ ಚಿಮ್ಮಿತು. ಎಸ್‌ಯುವಿ ಕಾರ್‌ನಷ್ಟು ದೊಡ್ಡ ಗಾತ್ರದ ರೆಕ್ಕೆ ಇರುವ ರಾಕೆಟ್ ಇದಾಗಿದ್ದು, ಯಶಸ್ವಿಯಾಗಿ ಉಡಾವಣೆಗೊಂಡಿತು. ಲ್ಯಾಂಡ್ ಆಗಬೇಕಿದ್ದ ಪ್ರಯೋಗದಲ್ಲಿ ಮೂರನೇ ಮತ್ತು ಅಂತಿಮ ಬಾರಿಗೆ ಯಶಸ್ವಿಯಾಯಿತು.

ಇಸ್ರೋದ ಈ ಪ್ರಯೋಗವನ್ನು ಭಾರತದ ಆತ್ಮ ನಿರ್ಭರತೆ ಕಡೆಗಿನ ದಿಟ್ಟತನದ ಹೆಜ್ಜೆ ಎಂದು ಹೇಳಲಾಗಿದೆ.

ಪುಷ್ಪಕ್ ಗಗನ ನೌಕೆಯು ಮರು ಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವಾಗಿದೆ. ರಾಕೆಟ್ ರೀತಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಈ ವಾಹನ, ಮರಳಿ ಭೂಮಿಗೆ ಬಂದು ಲ್ಯಾಂಡ್ ಆಗುತ್ತದೆ. ಹಾಗಾಗಿ, ಈ ವಾಹನವನ್ನು ಸ್ವದೇಶಿ ಗಗನ ನೌಕೆ ಎಂದೇ ಬಣ್ಣಿಸಲಾಗಿದೆ.

ಮರುಬಳಕೆ ರಾಕೆಟ್ ವಿಭಾಗದಲ್ಲಿ ಈ ವಾಹನ ಮಹತ್ವದ ಸ್ಥಾನ ಪಡೆದಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದರು.

error: Content is protected !!