ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಗಿನೆಲೆ ಶ್ರೀಗಳ ಕಿವಿಮಾತು
ಮಲೇಬೆನ್ನೂರು, ಜೂ. 19 – ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸೋಮ ವಾರ ಕಾಗಿನೆೆಲೆ ಕನಕಗುರು ಪೀಠದ ಬೆಳ್ಳೂಡಿ ಶಾಖಾ ಮಠಕ್ಕೆ ಆಗಮಿಸಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಆಶೀರ್ವಾದ ಪಡೆದರು.
ಈ ವೇಳೆ ಶ್ರೀಗಳು ಡಾ. ಪ್ರಭಾ ಅವರನ್ನು ಶ್ರೀಮಠದಿಂದ ಗೌರವಿಸಿ ಜನರ ಅಪೇಕ್ಷೆಯಂತೆ ನೀವು ಆಯ್ಕೆಯಾಗಿದ್ದೀರಿ, ಜನರ ನಿರೀಕ್ಷೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಹರಿಹರ ತಾಲ್ಲೂಕಿನ ಪ್ರಮುಖ ಬೇಡಿಕೆ ಯಾದ ಭೈರನಪಾದ ನೀರಾವರಿ ಯೋಜನೆ ಜಾರಿ ಹಾಗೂ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ತಲುಪಿಸುವುದು ಹಾಗೂ ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿ ಎಂದು ಕಾಗಿನೆಲೆ ಶ್ರೀಗಳು ನೂತನ ಸಂಸದರಿಗೆ ಹೇಳಿದರು.
ನಂತರ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಕ್ಷೇತ್ರದ ಜನರ ಹಾಗೂ ಗುರುಗಳ ಆಶೀರ್ವಾದದಿಂದಾಗಿ ನಮಗೆ ಗೆಲುವು ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನನ್ನ ಗೆಲುವಿಗೆ ಸಹಕಾರಿಯಾಗಿದೆ. ಜನರ ನಿರೀಕ್ಷೆಯಂತೆ ಮತ್ತು ನಿಮ್ಮ ಸಲಹೆಯಂತೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರುಗಳ ಜೊತೆ ಗೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶ್ರೀಗಳಿಗೆ ಮಾತು ಕೊಟ್ಟರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಕೂಡಾ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನೂತನ ಸಂಸದರಲ್ಲಿ ಕೋರಿದರು.
ಮುಖಂಡರಾದ ಎಂ. ಬಸಪ್ಪ, ಕೃಷ್ಣಾ ಸಾ ಭೂತೆ, ಬಿ.ರೇವಣಸಿದ್ದಪ್ಪ, ಕೆ. ಜಡಿಯಪ್ಪ, ಸಿ.ಎನ್. ಹುಲಿಗೇಶ್, ಕುಂಬಳೂರು ವಿರೂಪಾಕ್ಷಪ್ಪ, ಎಸ್.ಜಿ. ಪರಮೇಶ್ವರಪ್ಪ, ಎಸ್.ಎಲ್. ಆನಂದಪ್ಪ, ಕೆ.ಬಿ. ರಾಜಶೇಖರ್, ಹಬೀಬುಲ್ಲಾ ಸಾಬ್, ಜಿ. ಮಂಜುನಾಥ್ ಪಟೇಲ್, ಬಿ. ವೀರಯ್ಯ, ಪೂಜಾರ್ ಹಾಲೇಶಪ್ಪ, ಕರೇಕಟ್ಟಿ ಲೋಕೇಶ್, ಹನಗವಾಡಿ ಕುಮಾರ್, ಬೆಳ್ಳೂಡಿ ಬಸವರಾಜ್, ಕೆ.ವಿ. ರುದ್ರೇಶ್, ಕೆ.ಎನ್. ಹಳ್ಳಿಯ ಗುಬ್ಬಿ ರಂಗನಾಥ್, ಗುಂಡೇರಿ ಹನುಮಂತಪ್ಪ, ಮಲೇಬೆನ್ನೂರಿನ ಕೆ.ಪಿ. ಗಂಗಾಧರ್, ಪಿ.ಹೆಚ್. ಶಿವಕುಮಾರ್, ಪಿ.ಆರ್. ಕುಮಾರ್, ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಬಿ. ಉಮೇಶ್ ಸದಸ್ಯರಾದ ದುಂಡಿ ಸಿದ್ದೇಶ್, ವೀರೇಶ್ ಪೂಜಾರ್, ಶಂಕ್ರಪ್ಪ, ಯುವರಾಜ್ ಪರಮೇಶ್, ಮಾಗನೂರು ಹನುಮಪ್ಪ, ಯು.ಪಿ. ಶಿವಕುಮಾರ್, ಎಂ.ಆರ್. ಬಸವರಾಜ್, ಪ್ರಕಾಶ್, ವಕೀಲ ಲಿಂಗರಾಜ್, ಹನಗವಾಡಿಯ ಸಾರಥಿ ಉಮೇಶ್, ಟಿ. ಹನುಮಂತಪ್ಪ, ಎಳೆಹೊಳೆ ಕರಿಬಸಪ್ಪ, ಹಾಲಿವಾಣದ ಕೆ.ಪಿ. ಕುಮಾರ ಸ್ವಾಮಿ, ಕೆ. ರೇವಣಸಿದ್ದಪ್ಪ, ಜಿಗಳಿಯ ನಂದಿಗಾವಿ ತಿಪ್ಪಣ್ಣ, ಡಿ.ಎಂ. ಹರೀಶ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.