ಹೊಂದಾಣಿಕೆ ರಾಜಕೀಯ ಮಾಡಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ : ಡಾ. ಪ್ರಭಾ

ಹೊಂದಾಣಿಕೆ ರಾಜಕೀಯ ಮಾಡಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ : ಡಾ. ಪ್ರಭಾ

ದಾವಣಗೆರೆ, ಜೂ. 14-ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕ ರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಲಾಗಿದೆ ಎಂಬ ಕೆಲವರ ಆರೋಪದಲ್ಲಿ ಹುರುಳಿಲ್ಲ ಎಂದು ನೂತನ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲನುಭವಿಸಿದ ಮೇಲೆ ಅದಕ್ಕೆ ನಾನಾ ಕಾರಣಗಳನ್ನು ಹೇಳಬಹುದು. ಕಳೆದ 25 ವರ್ಷಗಳಿಂದ ಗೆಲ್ಲುತ್ತಲೇ ಇದ್ದರು. ಆದರೆ, ಈ ಬಾರಿ ಮತದಾರರು ಮೋದಿ ವಿರೋಧಿ ಚುನಾವಣೆ ಎಂದೇ ಪರಿಗಣಿಸಿದ್ದರು. ಈ ಹಿಂದೆ ಯಾರೇ ಸ್ಪರ್ಧೆ ಮಾಡಿದರೂ ಮೋದಿ ನೋಡಿ ಮತ ಹಾಕುತ್ತಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ನ ಪ್ರತಿಸ್ಪರ್ಧಿ ಮೋದಿ ಆಗಿದ್ದರು. ಹಾಗಾಗಿ ಇದೀಗ 25 ವರ್ಷಗಳ ಕಾಲ ದಾವಣಗೆರೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಹಿನ್ನಡೆ ವಿರೋಧಿಸಿ ನನಗೆ ಮತ ಹಾಕಿದ್ದಾರೆಂದು ಹೇಳಿದರು.

ಪ್ರಥಮ ಬಾರಿ ಸಂಸದೆಯಾಗಿ ಸಂಸತ್ ಭವನ ಪ್ರವೇಶಿಸಿದಾಗ ಅಲ್ಲಿನ ವಿಶೇಷತೆ ಗಮನಿಸಿದಾಗ ಅತೀವ ಸಂತೋಷವಾಯಿತು.  ಮೊದಲ ಪ್ರಧಾನಿಯಿಂದ ಹಿಡಿದು ಅನೇಕ ಹಿರಿಯ ಧುರೀಣರ ಭಾವಚಿತ್ರಗಳನ್ನು ನೋಡಿದಾಗ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರು, ಶಾಸಕರು, ಕಾರ್ಯಕರ್ತರನ್ನು ನೆನಪಿಸಿಕೊಂಡು ಧನ್ಯವಾದ ಹೇಳಿದೆ ಎಂದರು.

ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವುದೇ ನನ್ಮ ಮೊದಲ ಆದ್ಯತೆ. ಇನ್ನು ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಇದೇ 24 ರಿಂದ ಜುಲೈ 4 ರವರೆಗೆ ನಡೆಯುವ ಮೊದಲ ಅಧಿವೇಶನದಲ್ಲಿ ಭಾಗವಹಿಸಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇನೆ. ಅಭಿವೃದ್ಧಿ ಜೊತೆಗೆ ಐಟಿ-ಬಿಟಿ ಕೈಗಾರಿಕೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

error: Content is protected !!