ಹಬ್ಬಗಳು ಸಹಬಾಳ್ವೆ, ಶಾಂತಿಯುತವಾಗಿ ನಡೆಯಲಿ

ಹಬ್ಬಗಳು ಸಹಬಾಳ್ವೆ, ಶಾಂತಿಯುತವಾಗಿ ನಡೆಯಲಿ

ಬಕ್ರೀದ್ ಹಬ್ಬದ ಸೌಹಾರ್ದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್

ನೈತಿಕ ಪೊಲೀಸ್‌ಗಿರಿ ಬೇಡ ಎಂದ ಎಸ್ಪಿ

ದಾವಣಗೆರೆ, ಜೂ. 14 – ಬಕ್ರೀದ್ ವೇಳೆ ಯಾರೂ ಕಾನೂನು ಕೈಗೆತ್ತಿಕೊಳ್ಳುವ ರೀತಿ ವರ್ತಿಸದೇ, ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಹಬ್ಬ ನೆರವೇರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದ್ದಾರೆ.

ಜೂ.17ರಂದು ಬರಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಣಿ ವಧೆಗೆ ಸಂಬಂಧಿಸಿದಂತೆ ಇರುವ ಕಾನೂನುಗಳನ್ನು ಎಲ್ಲರೂ ಪಾಲಿಸಬೇಕು. ಗೋವುಗಳ ಸಾಗಣೆಗೆ ಸಂಬಂಧಿಸಿದಂತೆ ಯಾರೂ ನೈತಿಕ ಪೊಲೀಸ್‌ಗಿರಿ ಮಾಡಬಾರ ದು. ಯಾವುದೇ ಸಮಸ್ಯೆಗಳಿದ್ದರೂ ಪೊಲೀಸರ ಗಮನಕ್ಕೆ ತರಬೇಕು ಎಂದವರು ತಿಳಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಭಾವನೆಗೆ ಧಕ್ಕೆ ತರುವ ರೀತಿ ಹೇಳಿಕೆಯಿಂದ ಪ್ರಕರಣ ಗಳು ಹೆಚ್ಚಾಗುತ್ತಿವೆ. ಇಂತಹ ಪ್ರವೃತ್ತಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಸಾಮಾ ಜಿಕ ಮಾಧ್ಯಮ ಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಪೊಲೀಸ ರಿಗೆ ದೂರು ನೀಡಬೇಕು ಎಂದು ಎಸ್ಪಿ ಹೇಳಿದರು.

ಬಕ್ರೀದ್ ಹಬ್ಬದ ದಿನದಂದು ಹೆಚ್ಚು ಜನರು ಪ್ರಾರ್ಥನೆಗೆ ಸೇರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಇದರಿಂದ ಕಾನೂನು ಸುವ್ಯವಸ್ಥೆ ಕಾ ಯ್ದುಕೊಳ್ಳಲು ಸಹಾಯಕವಾಗುತ್ತದೆ. ಹಬ್ಬ ದ ದಿನದಂದು ಸಂಚಾರ ನಿಯಂತ್ರಣಕ್ಕೆ ಸಂಬಂಧಿ ಸಿದಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದವರು ಹೇಳಿದರು.

ಪಾಲಿಕೆ ಆಯುಕ್ತೆ ರೇಣುಕ ಮಾತನಾಡಿ, ಹಬ್ಬದ ದಿನದಂದು ಕಸ ವಿಲೇವಾರಿಗಾಗಿ ಅಗತ್ಯವಿರುವ ಕಡೆಗಳಲ್ಲಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮುಖಂಡರಾದ ಜೆ. ಅಮಾನುಲ್ಲಾ, ಚನ್ನಬಸಪ್ಪ ಗೌಡ್ರು, ಟಿ. ಅಜ್ಗರ್, ಕೆ.ಬಿ. ಶಂಕರನಾರಾಯಣ, ವೈ. ಮಲ್ಲೇಶ್, ಮೊಹಮ್ಮದ್ ಅಲಿ ಶೋಯೇಬ್, ಕೋಳಿ ಇಬ್ರಾಹಿಂ, ಸತೀಶ್ ಪೂಜಾರ್, ಮೊಹಮ್ಮದ್ ಜಾಫರ್, ಎಂ.ಜಿ ಶ್ರೀಕಾಂತ್, ಫಯಾಜ್ ಅಹಮದ್, ಮೊಯಿನುದ್ದೀನ್ ಪಾಷಾ ಮುಂತಾದವರು ಮಾತನಾಡಿ ಸಲಹೆಗಳನ್ನು ನೀಡಿದರು.

ಈ ಸಭೆಯಲ್ಲಿ ಎ.ಎಸ್.ಪಿ.ಗಳಾದ ವಿಜಯ್ ಕುಮಾರ್ ಸಂತೋಷ್, ಮಂಜುನಾಥ್, ಬೆಸ್ಕಾಂ ಅಧಿಕಾರಿ ಕೋಮಲ ಮತ್ತಿತರರು ಉಪಸ್ಥಿತರಿದ್ದರು.

error: Content is protected !!