ಬ್ಯಾಂಕ್‌ ವ್ಯವಸ್ಥಾಪಕನ ಅಪಹರಣ, ಮಾರಣಾಂತಿಕ ಹಲ್ಲೆ : ಇಬ್ಬರ ಬಂಧನ

ಬ್ಯಾಂಕ್‌ ವ್ಯವಸ್ಥಾಪಕನ ಅಪಹರಣ, ಮಾರಣಾಂತಿಕ ಹಲ್ಲೆ : ಇಬ್ಬರ ಬಂಧನ

ಹೊನ್ನಾಳಿ, ಮೇ 31- ದಾವಣಗೆರೆಯ ಬ್ಯಾಂಕ್ ಮ್ಯಾನೇಜರ್‌ರವರನ್ನು ಶುಕ್ರವಾರ ಸಂಜೆ ಅಪಹರಿಸಿದ ತಂಡ ಹೊನ್ನಾಳಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

ಲೋನ್ ಕೊಡಲು ಸಾಧ್ಯವಿಲ್ಲ, ದಾಖಲೆಗಳು ನಕಲಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಆರು ಜನರ ತಂಡ ಹಲ್ಲೆ ಮಾಡುವ ಕೃತ್ಯಕ್ಕೆ ಮುಂದಾಗಿತ್ತು ಎಂದು ತಿಳಿದು ಬಂದಿದೆ. 

ಹಲ್ಲೆಗೊಳಗಾದ ವ್ಯಕ್ತಿ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೊಂಡ ವ್ಯಕ್ತಿಯು ದಾವಣಗೆರೆ ಕೆಟಿಜಿ ನಗರದ ಎಲ್ಐಸಿ ಹೌಸಿಂಗ್ ಕಾರ್ಪೊರೇಷನ್ ಬ್ಯಾಂಕ್ ಮ್ಯಾನೇಜರ್ ಶರಣ್ ಎಂದು ತಿಳಿದಿದ್ದು, ಇವರನ್ನು ಮಹಿಳೆಯೊಬ್ಬರ ಪ್ರೀತಿ ನಾಟಕದ ನೆಪ ದಲ್ಲಿ ಅಪಹರಣ ಮಾಡಿದ ತಂಡ ನೀನು ಮಹಿಳೆ ಒಬ್ಬಳನ್ನು ಚುಡಾಯಿಸುತ್ತೀಯಾ ಎಂದು ಅಪಹರಣಕ್ಕೆ ಮುಂದಾಗಿದ್ದು, ನಂಬರ್ ಇರದ ಎರ್ಟಿಗಾ ಕಾರ್‌ನಲ್ಲಿ ಶರಣ್‌ ಅವರನ್ನು ನಾಗರಾಜ್, ನಾಸೀರ್, ಮಂಜು, ರಾಮು ಎಂಬುವವರು ಕಿಡ್ನಾಪ್ ಮಾಡಿದ್ದು, ಇದೇ ಗಾಡಿ ಹಿಂದೆ ಶಿಫ್ಟ್ ಕಾರ್‌ನಲ್ಲಿ ವಿಶ್ವನಾಥ್ ಮತ್ತು ಚಂದನ್ ಫಾಲೋ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. 

ದಾವಣಗೆರೆ ಕಂಟ್ರೋಲ್ ರೂಂನ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಹೊನ್ನಾಳಿ ಪೊಲೀಸರು, ಠಾಣೆ ಮುಂದೆ ಆರೋಪಿಗಳ ಗಾಡಿ ಪಾಸ್ ಆಗಬೇಕಿದ್ದು, ಅವರಿಗೆ ಪೊಲೀಸರು ಫಾಲೋ ಮಾಡುವ ಅನುಮಾನ ಬಂದು ಪಟ್ಟಣದ ಒಡ್ಡಿನ್ ಕೆರೆ ಹಳ್ಳದ ಬಳಿ ಚಾಕು ಮೂಲಕ ಬೆನ್ನಿಗೆ ಇರಿದಿದ್ದಾರೆ. ನಾಗರಾಜ್, ನಾಸೀರ್ ಎಂಬುವರನ್ನು ಬಂಧಿಸಲಾಗಿದೆ. 

ಮಂಜು, ರಾಮು, ವಿಶ್ವನಾಥ್, ಚಂದನ್ ತಪ್ಪಿಸಿಕೊಂಡಿದ್ದಾರೆ. ಹೊನ್ನಾಳಿ ಠಾಣೆಗೆ ಕೆಟಿಜಿ ನಗರದ ಪೊಲೀಸ್ ಇನ್‌ಸ್ಪೆಕ್ಟರ್‌ ಸುನಿಲ್ ಕುಮಾರ್ ಭೇಟಿ ನೀಡಿ, ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್‌ ಮುದ್ದುರಾಜ್ ಅವರಿಂದ ಮಾಹಿತಿ ಪಡೆದು, ನಂತರ ಆಸ್ಪತ್ರೆಗೆ ತೆರಳಿದ ಘಟನೆ ನಡೆದಿದೆ. ಹೆಚ್ಚಿನ ವಿಚಾರಣೆಯಿಂದ ಘಟನೆಯ ಮಾಹಿತಿ ತಿಳಿದು ಬರಬೇಕಿದೆ.

error: Content is protected !!