ಶ್ರೀಶೈಲ ಜಗದ್ಗುರುಗಳು
ದಾವಣಗೆರೆ, ಮೇ 23- ಮನುಷ್ಯನಿಗೆ ಕಾಲಕಾಲಕ್ಕೆ ಸಮ ಯೋಚಿತವಾಗಿ ಶಾಸ್ತ್ರೋಕ್ತವಾದ ಉತ್ತಮ ಸಂಸ್ಕಾರಗಳನ್ನು ನೀಡುವು ದರಿಂದ ವ್ಯಕ್ತಿತ್ವ ವಿಕಾಸವಾಗಿ ಸಮಾಜದಲ್ಲಿ ಎಲ್ಲರ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಶ್ರೀ ಶ್ರೀಶೈಲ ಪೀಠದ ಜಗದ್ಗುರು
ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ನಗರದ ಶ್ರೀಶೈಲ ಪೀಠದ ಜಗದ್ಗುರು ಪಂಚಾಚಾರ್ಯ ಧರ್ಮ ಸಂಸ್ಥೆ (ಶ್ರೀಶೈಲ ಮಠ)ಯಲ್ಲಿ ಒಂದು ತಿಂಗಳ ಪರ್ಯಂತ ನಡೆದುಕೊಂಡು ಬಂದ ವೇದ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ವಿಶೇಷ ಸಂಸ್ಕಾರದ ಬಲದಿಂ ದಲೇ ಒಂದು ಕಲ್ಲು ಮೂರ್ತಿ ಯಾಗುತ್ತದೆ, ನೀರು ತೀರ್ಥವಾಗು ತ್ತದೆ, ಅನ್ನ ಪ್ರಸಾದವಾಗುತ್ತದೆ. ಇದರಂತೆ ಉತ್ತಮ ಸಂಸ್ಕಾರದಿಂದ ಮನುಷ್ಯನು ಮಹಾದೇವನಾಗು ತ್ತಾನೆ. ಮನಸ್ಸಿನಿಂದ ಹೇಗೆ ವಿಚಾರಿ ಸಬೇಕು, ಹೇಗೆ ಮಾತನಾಡಬೇಕು, ಜೀವನದಲ್ಲಿ ಹೇಗೆ ನಡೆದುಕೊಳ್ಳ ಬೇಕು ಎನ್ನುವುದೆಲ್ಲ ಉತ್ತಮ ಸಂಸ್ಕಾರದಿಂದ ಅರಿವಿಗೆ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಪಾಲಕರೂ ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡಿಸಬೇಕು. ತಂದೆ-ತಾಯಂದಿರು ಕೇವಲ ಮಕ್ಕಳಿಗೆ ಜನ್ಮ ಕೊಟ್ಟರೆ ಸಾಲದು, ಅವರಿಗೆ ವಿದ್ಯೆ, ವಿನಯ, ಉತ್ತಮ ಸದ್ಗುಣಗಳನ್ನು ನೀಡುವ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು.
ವೇದಾಗಮಗಳು ಭಾರತ ದೇಶದ ಅತ್ಯಂತ ಪ್ರಾಚೀನ ವಾಙ್ಮಯಗಳು. ಇವುಗಳ ಅಧ್ಯಯನ, ಅಧ್ಯಾಪನ ಮತ್ತು ಪಠಣಗಳಿಂದ ಮನದಲ್ಲಿ ಏಕಾಗ್ರತೆ ಮತ್ತು ವಾತಾವರಣದಲ್ಲಿ ಪ್ರಶಾಂತತೆ ಲಭಿಸುತ್ತದೆ. ಈ ವೇದಾಗಮ ಮಂತ್ರಗಳನ್ನು ಸರಿಯಾಗಿ ಪಠಿಸುತ್ತಾ ಭಕ್ತರ ಧಾರ್ಮಿಕ ವಿಧಿವಿಧಾನಗಳನ್ನು ವಿಧ್ಯುಕ್ತವಾಗಿ ನೆರವೇರಿಸುವ ಮೂಲಕ ಭಕ್ತರ ಮನೋಬಯಕೆಗಳು ಪೂರ್ಣಗೊಳ್ಳಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ವೇದಾಗಮ ಆಧಾರಿತ ಸಂಸ್ಕಾರವನ್ನು ಶ್ರೀಶೈಲ ಮಠದಲ್ಲಿ ನೀಡಿಕೊಂಡು ಬರಲಾಗಿದೆ. ಅದು ಯಶಸ್ವಿಯಾಗಿ ಸಂಪನ್ನಗೊಂಡು ನೂರಕ್ಕಿಂತ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ಇದರ ಲಾಭವನ್ನು ಪಡೆದುಕೊಂಡಿದ್ದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಧರ್ಮಸಂದೇಶ ನೀಡಿದರು. ಅಂಬಿಕಾ ನಗರದ ಶ್ರೀಗಳು, ಅಕ್ಕಿ ಆಲೂರಿನ ಶ್ರೀಗಳು, ಹಂಪ ಸಾಗರದ ಶ್ರೀಗಳು ಮತ್ತು ಕರಿಬಂಟನಾಳದ ಶ್ರೀಗಳು ಉಪಸ್ಥಿತರಿದ್ದರು.
ಬೆಂಗಳೂರಿನ ಆರಾಧ್ಯ ಶಾಸ್ತ್ರಿಗಳು, ಶಿರಗುಪ್ಪಾದ ಚಿಕ್ಕ ಬಸನಗೌಡರು ಚೆನ್ನಬಸನಗೌಡರು ಭಾಗವಹಿಸಿದ್ದರು. ಪಾಠಶಾಲೆಯ ಪ್ರಾಚಾರ್ಯ ಬಸವರಾಜ ಶಾಸ್ತ್ರಿಗಳು, ಶ್ರೀ ಮಠದ ಮ್ಯಾನೇಜರ್ ಬನ್ನಯ್ಯ, ನಾಗರಾಜ ಸ್ವಾಮಿ ಶಿಬಿರದ ಮತ್ತು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.