ಜಿಎಂ ವಿವಿಯಲ್ಲಿ ಬಿಐಎಸ್ ಕ್ಲಬ್ ಉದ್ಘಾಟನೆ, ಪ್ರಾಜೆಕ್ಟ್‌ ಪ್ರದರ್ಶನ

ಜಿಎಂ ವಿವಿಯಲ್ಲಿ ಬಿಐಎಸ್ ಕ್ಲಬ್ ಉದ್ಘಾಟನೆ, ಪ್ರಾಜೆಕ್ಟ್‌ ಪ್ರದರ್ಶನ

ದಾವಣಗೆರೆ,ಮೇ 22-  ನಗರದ    ಜಿಎಂ ವಿಶ್ವವಿದ್ಯಾಲಯ ಮತ್ತು ಭಾರತೀಯ ಮಾನಕ ಬ್ಯೂರೋ ಸಹಯೋಗದೊಂದಿಗೆ ಸ್ಥಾಪಿತವಾಗಿರುವ ಸ್ಟ್ಯಾಂಡರ್ಡ್ ಕ್ಲಬ್‍ಗಳ ಉದ್ಘಾಟನೆ ಮತ್ತು ಪ್ರಾಜೆಕ್ಟ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ    ಹಮ್ಮಿಕೊಳ್ಳಲಾಗಿದ್ದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ಮಾನಕ ಬ್ಯೂರೋದ ವಿಜ್ಞಾನಿ ಮತ್ತು ಉಪ ನಿರ್ದೇಶಕ    ಅಶುತೋಷ್ ಅಗರ್‍ವಾಲ್ ಆಗಮಿಸಿ, ವಿದ್ಯಾರ್ಥಿಗಳಿಗೆ ಭಾರತೀಯ ಮಾನದಂಡಗಳು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ವಿವರಣೆ ನೀಡಿದರು. 

ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್‍ ಕುರಿತಾದ ಸಂಕ್ಷಿಪ್ತ ವಿವ ರಣಾ ಪುಸ್ತಕವನ್ನು ಅಗರ್‌ವಾಲ್ ಬಿಡುಗಡೆ ಗೊಳಿಸಿದರು.   

 ಜಿಎಂ ವಿವಿ  ಕುಲಪತಿ  ಡಾ. ಎಸ್ .ಆರ್. ಶಂಖಪಾಲ್ ಅವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತೀಯ ಮಾನ ದಂಡಗಳು ವಿದ್ಯಾರ್ಥಿಗಳ  ಕೌಶಲ್ಯ ವೃದ್ದಿಗೆ ಹೇಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.  

ದೈನಂದಿನ ಜೀವನದಲ್ಲಿ ಭಾರತೀಯ ಮಾನ ದಂಡಗಳನ್ನು ಅಳವಡಿಸಿಕೊಳ್ಳಲು ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ ಕರೆ ನೀಡಿದರು. ಜಿಎಂ ವಿವಿಯಲ್ಲಿ ಒಟ್ಟು 13 ಸ್ಟ್ಯಾಂಡರ್ಡ್ ಕ್ಲಬ್‍ಗಳನ್ನು ಪ್ರಾರಂಭಿಸಲಾಗಿದ್ದು, ಅವುಗಳ ಕಾರ್ಯ ಚಟುವಟಿಕೆಗಳ ಬಗ್ಗೆ  ಬಿ.ಐ.ಎಸ್ ಕ್ಲಬ್‍ಗಳ ಮುಖ್ಯ ಸಂಯೋಜಕ  ಡಾ. ಪ್ರದೀಪ್ ಎಂ. ಜೆ ವಿವರಿಸಿದರು. 

ಜಿ.ಎಂ. ವಿವಿಯ ಸಹಕುಲಪತಿ  ಡಾ. ಹೆಚ್.ಡಿ ಮಹೇ ಶಪ್ಪ, ಕುಲಸಚಿವ  ಡಾ.ಬಿ.ಎಸ್‌.ಸುನೀಲ್ ಕುಮಾರ್ ಮತ್ತು  ಸಂಶೋಧನಾ ವಿಭಾಗದ ಸಹಾಯಕ ಡೀನ್ ಡಾ.  ಕೆ. ಸ್ವರೂಪ್  ಉಪಸ್ಥಿತರಿದ್ದರು. ಆರ್. ಚಂದನ  ಪ್ರಾರ್ಥಿಸಿದರು, ಸಂಶೋಧನಾ ಡೀನ್ ಡಾ. ಕೆ. ಎನ್ ಭರತ್  ಸ್ವಾಗತಿಸಿದರು.   ಮಾರುತಿ ಎಸ್.ಟಿ. ವಂದಿಸಿದರು.   ಗಣೇಶ್ ಜಿ. ತಿಳವೆ ಕಾರ್ಯಕ್ರಮ ನಿರೂಪಿಸಿದರು. 

error: Content is protected !!