ದಾವಣಗೆರೆ, ಮೇ 22- ತಾಲ್ಲೂಕು ಕದಳಿ ಮಹಿಳಾ ವೇದಿಕೆಯಿಂದ 153ನೇ ಕಮ್ಮಟದಲ್ಲಿ ಬಸವ ಜಯಂತಿ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಎಸ್. ನಿಜಲಿಂಗಪ್ಪ ಬಡಾ ವಣೆಯಲ್ಲಿರುವ ಹಿಮೊಫಿಲಿಯಾ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರಮಿಕ ವರ್ಗದವರಿಗೆ ವಚನಗಳನ್ನು ಹೇಳಿಕೊಡಲಾಯಿತು. ಪೂರ್ಣಿಮಾ ಪ್ರಸನ್ನ ಕುಮಾರ್ ವಚನ ಹೇಳಿಕೊಟ್ಟರು. ಶ್ರೀಮತಿ ಮಮತಾ ನಾಗರಾಜ್ ವಚನಗಳನ್ನು ವಿಶ್ಲೇಷಿಸಿ, ಅರ್ಥ ತಿಳಿಸಿದರು. ಸರಳಗನ್ನಡದಲ್ಲಿರುವ ಈ ವಚನಗಳನ್ನು ಪ್ರತಿಯೊಬ್ಬರು ಕಲಿತು ಅನುಸರಿಸಬೇಕು ಎಂದು ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಹಾಗೂ ಹಿರಿಯ ವೈದ್ಯರಾದ ಡಾ. ಶಾಂತಾ ಭಟ್ ಅವರುಗಳು ಬಸವಣ್ಣನವರು ಕಾಯಕದ ಮಹತ್ವ ತಿಳಿಸಿದ್ದಾರೆ ಎಂದು ಹೇಳಿದರು. ಈಗಿನ ಜನಾಂಗದವರು ಅವರ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ. ಬಿ. ಪರಮೇಶ್ವರಪ್ಪ ಮಾತನಾಡಿ, ಕದಳಿ ವೇದಿಕೆಯಿಂದ ಉತ್ತಮ ಕಾರ್ಯಗಳಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂದಿನಿ ಗಂಗಾಧರ್ ಸ್ವಾಗತಿಸಿದರು. ವಿಜಯಾ ಚಂದ್ರ ಶೇಖರ್ ನಿರೂಪಿಸಿದರು. ಗಾಯತ್ರಿ ವಸ್ತ್ರದ್, ನಿರ್ಮಲ ಶಿವಕುಮಾರ್, ಸೌಮ್ಯ ಸತೀಶ್, ವಾಣಿ ರಾಜ್ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕದಳಿ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಭೀಮಸಮುದ್ರದ ಲಿಂ. ಹಾಲಮ್ಮ ಮತ್ತು ಲಿಂ. ಮಲ್ಲಿಕಾರ್ಜು ನಪ್ಪ ದತ್ತಿ (ದತ್ತಿ ದಾನಿಗಳು ಭೀಮಸಮುದ್ರದ ಜಿ.ಎಂ. ಪ್ರಸನ್ನ ಕುಮಾರ್), ಮುದ್ದು ವೀರಮ್ಮ ಮತ್ತು ಹೆಚ್. ಎಸ್. ಶಿವಣ್ಣ ಅವರ (ದತ್ತಿ ದಾನಿಗಳು ತುಮಕೂರಿನ ಜಿ. ಆರ್. ಶೋಭಾ ಮತ್ತು ಜಿ. ಆರ್. ಪ್ರಸನ್ನ ಕುಮಾರ್) ದತ್ತಿ ಕಾರ್ಯಕ್ರಮ ನಡೆಯಿತು.