ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

ಮೊದಲ ದಿನ 630 ಕ್ರೀಡಾಪಟುಗಳು ಭಾಗಿ

ದಾವಣಗೆರೆ, ಮೇ 19 – ದಾವಣಗೆರೆ ಡಿಸ್ಟ್ರಿಕ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ನಗರದ ನೇತಾಜಿ ಸುಭಾಶ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿರುವ 15 ಹಾಗೂ 17 ವರ್ಷದೊಳಗಿನ ವಿಭಾಗದ ಕರ್ನಾಟಕ ಸ್ಟೇಟ್ ರ‍್ಯಾಂಕಿಂಗ್  ಬ್ಯಾಡ್ಮಿಂಟನ್ ಟೂರ್ನಿಮೆಂಟ್‌ಗೆ ಭಾನುವಾರ ಚಾಲನೆ ನೀಡಲಾಯಿತು.

ಕ್ರೀಡಾಕೂಟದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಷ್ಟೇ ಅಲ್ಲದೇ, ಹೊರ ರಾಜ್ಯಗಳಿಂ ದಲೂ ಕ್ರೀಡಾಪಟುಗಳು ಆಗಮಿಸಿದ್ದಾರೆ. 1,046 ಕ್ರೀಡಾಪಟುಗಳು ನೋಂದಣಿಯಾಗಿದ್ದು, ಮೊದಲ ದಿನ 630 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕ್ರೀಡಾಂಗಣದ ಆರು ಅಂಕಣಗಳಲ್ಲಿ ಏಳು ದಿನಗಳ ಕಾಲ ಸ್ಪರ್ಧೆಗಳು ನಡೆಯಲಿವೆ. ಜೊತೆಗೆ ಆಫೀಸರ್ಸ್ ಕ್ಲಬ್‌ನ ಎರಡು ಅಂಕಣಗಳನ್ನೂ ಬಳಸಿಕೊಳ್ಳಲಾಗುವುದು.

15 ಹಾಗೂ 17 ವರ್ಷದ ಒಳಗಿನವರ ಬಾಲಕರು, ಬಾಲಕಿಯರು, ಬಾಲಕರ ಡಬಲ್ಸ್, ಬಾಲಕಿಯರ ಡಬಲ್ಸ್  ಹಾಗೂ ಮಿಕ್ಸಡ್ ಡಬಲ್ಸ್ ಹೀಗೆ ಹತ್ತು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ - Janathavani

ಕ್ರೀಡಾಕೂಟದ ಉದ್ಘಾಟನೆಯನ್ನು ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಶಿವಗಂಗ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಎಸ್.ಎನ್. ಬಸವರಾಜ್, ರಾಜ್ಯ ಬ್ಯಾಡ್ಮಿಂಟನ್ ಒಕ್ಕೂಟದ ಉಪಾಧ್ಯಕ್ಷ ಶಿವರಾಜ್ ಮಾತೂರ್, ಮುಖ್ಯ ರೆಫ್ರಿ ವಸಂತ್ ಕುಮಾರ್, ಪಂದ್ಯ ನಿರ್ವಹಣಗಾರ್ತಿ ಬೀನಾ, ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಮಹೇಶ್ ಶೆಟ್ರು, ಕಾರ್ಯದರ್ಶಿ ಡಿ.ಆರ್. ಗಿರಿರಾಜು, ಜಿಲ್ಲಾ ಬ್ಯಾಡ್ಮಿಂಟನ್ ಒಕ್ಕೂಟದ ಉಪಾಧ್ಯಕ್ಷ ಶ್ರೀಧರ್, ಪದಾಧಿಕಾರಿಗಳಾದ ಎಂ.ಆರ್. ಸ್ವಾಮಿ, ಇಸ್ಮಾಯಿಲ್, ಕೆ.ಹೆಚ್. ಸಿದ್ದೇಶ್ವರ, ಶಶಿಧರ ಆಚಾರ್, ಸತೀಶ್, ಸೂರಜ್, ಸುರೇಶ್, ಅಮಾನ್, ಮಂಜಪ್ಪ ಹಿತ್ತಲಮನಿ ಉಪಸ್ಥಿತರಿದ್ದರು.

ಪಂದ್ಯಾವಳಿ ಕುರಿತು ಮಾತನಾಡಿರುವ ಜಿಲ್ಲಾ ಅಸೋಸಿಯೇಷನ್‌ನ ಅಧ್ಯಕ್ಷ ಎಸ್.ಎನ್. ಬಸವರಾಜ್, ಈ ಹಿಂದೆ ರಾ್ಯಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 600-700 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ನೋಂದಣಿಯಾಗಿದ್ದಾರೆ. ಕ್ರೀಡಾಪಟುಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದರು.

ರಾ್ಯಂಕಿಂಗ್ ಟೂರ್ನಮೆಂಟ್‌ಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರು, ಚೆನ್ನೈವರೆಗೂ ಹೋಗಬೇಕಿತ್ತು. ಈಗ ನಗರದಲ್ಲೇ ಪಂದ್ಯಾವಳಿ ನಡೆಯುತ್ತಿದೆ. ಇದು ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿದೆ.  ರಾ್ಯಂಕಿಂಗ್ ಪಂದ್ಯಾವಳಿ ಕ್ರೀಡಾಪಟುಗಳ ಮುಂದಿನ ಭವಿಷ್ಯಕ್ಕೆ ನೆರವಾಗಲಿದೆ ಎಂದವರು ತಿಳಿಸಿದರು.

ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಕ್ರೀಡಾಪಟುಗಳು ಬಂದಿದ್ದಾರೆ. ಪಕ್ಕದ ರಾಜ್ಯಗಳಿಂದಲೂ ಕ್ರೀಡಾಪಟುಗಳು ಬಂದಿದ್ದಾರೆ ಎಂದ ಅವರು, 64 ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

error: Content is protected !!