ಮಲೇಬೆನ್ನೂರು, ಮೇ 19- ಕೊಮಾರನಹಳ್ಳಿ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಇಲ್ಲಿರುವ ತೋಟಗಳಿಗೆ ಮತ್ತು ಮಿಚ್ಚುಳ್ಳಿ ಜಲಪಾತಕ್ಕೆ ಜೀವಕಳೆ ಬಂದಿದೆ. ಒಂದೇ ಮಳೆಗೆ ಗುಡ್ಡಗಳಿಂದ ಹರಿದು ಬರುವ ನೀರು ಜಲಪಾತದಲ್ಲಿ ನಿಧಾನವಾಗಿ ಹರಿದು ಬೀಳುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಅಲ್ಲದೇ ಹಾಲುವರ್ತಿ ಹಳ್ಳದಲ್ಲೂ ನೀರು ಹರಿದಿರುವುದು ತೋಟಗಳ ರೈತರಿಗೆ ಹರ್ಷ ತಂದಿದೆ. ಮುಂದೆ ಈ ಭಾಗದಲ್ಲಿ ನಿರಂತರ ಮಳೆಯಾಗಿ ಹಾಲುವರ್ತಿ ಹಳ್ಳ ತುಂಬಿ ಹರಿಯುವ ನೀರು ಮತ್ತು ಮಿಚ್ಚುಳ್ಳಿ ಜಲಪಾತದ ಮೂಲಕ ಹರಿಯುವ ನೀರು ಕೊಮಾರನಹಳ್ಳಿ ಕೆರೆ ಸೇರಲಿದೆ.
January 9, 2025