ಭಗೀರಥ ಮಹರ್ಷಿ ಸಾಧನೆ ಅಸಾಮಾನ್ಯ

ಭಗೀರಥ ಮಹರ್ಷಿ ಸಾಧನೆ ಅಸಾಮಾನ್ಯ

ಭಗೀರಥ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ 

ದಾವಣಗೆರೆ, ಮೇ 14 – ಭಗೀರಥ ಮಹರ್ಷಿ ತನ್ನ ಘೋರ ತಪಸ್ಸಿನ ಮೂಲಕ ಕಠಿಣ ಕಾರ್ಯ ಪೂರೈಸಿ, ಪವಿತ್ರ ಗಂಗೆಯನ್ನು ಭೂಮಿಗೆ ತಂದ ಚೈತನ್ಯದ ಚಿಲುಮೆ, ಛಲಗಾರ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ ತಿಳಿಸಿದರು.

 ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮತ್ತು ಉಪ್ಪಾರ ಸಮಾಜ, ದಾವ ಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿಯಲ್ಲಿ ಭಾಗವಹಿಸಿ, ಭಗೀ ರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ಭಗೀರಥ ಮಹರ್ಷಿಯ ಸಾಹಸಗಾಥೆಯು ನಿರ್ಣಯ, ಭಕ್ತಿ ಹಾಗೂ ಅಸಾಧ್ಯವಾದುದನ್ನು ಕಠಿಣ ಪ್ರಯತ್ನದ ಮೂಲಕ ಸಾಧ್ಯ ಮಾಡುವುದನ್ನು ತೋರಿಸಿಕೊಟ್ಟ ವರು. ಭಗೀರಥ ಮಹರ್ಷಿ ತನ್ನ ಘೋರ ತಪಸ್ಸಿನಿಂದ ಪವಿತ್ರ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಜಲತರ್ಪಣ ಮಾಡಿದ ಭಗೀರಥ ಮಹರ್ಷಿ ಸಾಧನೆ ಅಸಾ ಮಾನ್ಯ, ಇದು ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದೆಂಬ ಮುನ್ನುಡಿ ಬರೆದವರು ಭಗೀರಥ ಮಹರ್ಷಿ ಗಳು, ಸದಾ ಇವರ ಮಾರ್ಗದಲ್ಲಿ ನಡೆಯುವಂತಾಗಬೇಕೆಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ರಮೇಶ್ ಎಂ.ಸಿ, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಗಿರೀಶ್ ಕೆ.ಬಿ, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಮಾರುತಿ ಎಚ್.ಡಿ, ರಾಜ್ಯ ಭಗೀರಥ ನೌಕರರ ಸಂಘದ ಅಧ್ಯಕ್ಷ ಎನ್.ಎಸ್.ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳನಾಯ್ಕ್ ಇತರರಿದ್ದರು.

error: Content is protected !!