ದಾವಣಗೆರೆ, ಮೇ 12 – ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಶ್ರೀ ಶಂಕರಾ ಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ನಗರದ ರಾಜಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.
ಉತ್ಸವದಲ್ಲಿ ಮಹಿಳೆಯರಿಂದ ಭಜನೆ, ಪುರುಷರಿಂದ ನೃತ್ಯ, ಭಜನೆ ಹಾಗೂ ವಿಶೇಷವಾಗಿ ಮಧು ಅಣ್ಣ ಮತ್ತು ತಂಡದವರಿಂದ ಚಂಡೇ ವಾದ್ಯ ಈ ಉತ್ಸವಕ್ಕೆ ಮೆರಗು ತಂದಿತು.
ಪಲ್ಲಕ್ಕಿ ಉತ್ಸವದ ನೇತೃತ್ವವನ್ನು ಶ್ರೀ ಶಂಕರ ಸೇವಾ ಸಂಘದ ಉಪಾಧ್ಯಕ್ಷ ಮೋತಿ ಸುಬ್ರಹ್ಮಣ್ಯ, ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ಮಾಜಿ ಅಧ್ಯಕ್ಷ ಡಾ. ಎಸ್. ಆರ್. ಹೆಗಡೆ, ಪುರೋಹಿತ ಪುಟ್ಟಸ್ವಾಮಿ, ಸಂಘದ ಸದಸ್ಯರು ವಿನಾಯಕ ಜೋಶಿ, ಸುಬ್ಬಣ್ಣ (ಮಂಡಕ್ಕಿ), ಅನಿಲ್ ಬಾರಂಗಳ್, ಬಾಲಕೃಷ್ಣ ವೈದ್ಯ, ಚೈತನ್ಯ ನಾರಾಯಣಸ್ವಾಮಿ, ರಾಘವೇಂದ್ರ, ಶ್ರೀಕಾಂತ್ ಜೋಶಿ, ರಮೇಶ್ ಪಾಟೀಲ್ ಶ್ರೀಕಾಂತ್ ಕೆ.ಎಂ ಹಾಗೂ ಅನೇಕ ಸದಸ್ಯರುಗಳು ಭಾಗವಹಿಸಿದ್ದರು.