ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನಕ್ಕೆ ಅವಕಾಶ
ದಾವಣಗೆರೆ, ಮೇ 6- ಲೋಕಸಭಾ ಚುನಾವಣಾ ಮತದಾನ ನಾಳೆ ದಿನಾಂಕ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದ್ದು, ಎಲ್ಲಾ ಕ್ಷೇತ್ರಗಳ ಮಸ್ಟ ರಿಂಗ್ ಕೇಂದ್ರಗಳಿಂದ ಸಿಬ್ಬಂದಿಗಳು ಮತಗಟ್ಟೆಯನ್ನು ತಲುಪಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಸೇರಿ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದೆ. ಕ್ಷೇತ್ರದಲ್ಲಿ 8,51,990 ಪುರುಷ, 8,57,117 ಮಹಿಳೆ, 137 ಇತರೆ ಸೇರಿ 17,09,244 ಮತದಾರರಿದ್ದು 1946 ಮತಗಟ್ಟೆಗಳಿವೆ.
ಕ್ಷೇತ್ರವಾರು ವಿವರದನ್ವಯ ಜಗಳೂರು 263 ಮತಗಟ್ಟೆಗಳಲ್ಲಿ 100046 ಪುರುಷ, 98759 ಮಹಿಳೆ, 10 ಇತರೆ ಸೇರಿ 198815 ಮತದಾರರಿದ್ದಾರೆ.
ಹರಪನಹಳ್ಳಿ 253 ಮತಗಟ್ಟೆಗಳಲ್ಲಿ 112969 ಪುರುಷ, 110985 ಮಹಿಳೆ ಹಾಗೂ 19 ಇತರೆ ಸೇರಿ 223973 ಮತದಾರರು. ಹರಿಹರ ಕ್ಷೇತ್ರದ 228 ಮತಗಟ್ಟೆಗಳಲ್ಲಿ 105510 ಪುರುಷ, 106870 ಮಹಿಳೆ, 17 ಇತರೆ ಸೇರಿ 212397.
ದಾವಣಗೆರೆ ಉತ್ತರ 245 ಮತಗಟ್ಟೆಗಳಲ್ಲಿ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156. ದಾವಣಗೆರೆ ದಕ್ಷಿಣ 217 ಮತಗಟ್ಟೆ, 109184 ಪುರುಷ, 111774 ಮಹಿಳೆ, 39 ಇತರೆ ಸೇರಿ 220997.
ಮಾಯಕೊಂಡ 240 ಮತಗಟ್ಟೆಗಳಲ್ಲಿ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089.
ಚನ್ನಗಿರಿ 255 ಮತಗಟ್ಟೆಗಳಲ್ಲಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870.
ಹೊನ್ನಾಳಿ 245 ಮತಗಟ್ಟೆಗಳಲ್ಲಿ 100384 ಪುರುಷ, 100560 ಮಹಿಳೆ, 3 ಇತರೆ ಸೇರಿ 200947 ಮತದಾರರಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿದ್ದು ಇದರಲ್ಲಿ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿ 2 ಸೇರಿ ಪ್ರತಿ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ 4 ಜನ ಮತದಾನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ. ಕ್ಷೇತ್ರದಲ್ಲಿ ಹೆಚ್ಚುವರಿ ಸೇರಿದಂತೆ ಒಟ್ಟು 8996 ಮತದಾನ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಅವರು ಎಲ್ಲಾ ತಾಲ್ಲೂಕುಗಳ ಮಸ್ಟರಿಂಗ್ ಕೇಂದ್ರದಿಂದ ಇವಿಎಂನೊಂದಿಗೆ, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್ ಸೇರಿದಂತೆ ಶಾಸನಬದ್ದ ಲಕೋಟೆಗಳು, ಶಾಸನಬದ್ದವಲ್ಲದ ಲಕೋಟೆಗಳೊಂದಿಗೆ ಮತಗಟ್ಟೆ ತಲುಪಿದ್ದಾರೆ.
ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ದಾವಣಗೆರೆ ಉತ್ತರ ಡಿ.ಆರ್.ಆರ್.ವಿದ್ಯಾಸಂಸ್ಥೆ, ದಾವಣಗೆರೆ ದಕ್ಷಿಣ ಹೈಸ್ಕೂಲ್ ಮೈದಾನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಮಾಯಕೊಂಡ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು, ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ ಇಲ್ಲಿ ಮಸ್ಟರಿಂಗ್ ನಡೆದಿದ್ದು, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ವೆಂಕಟೇಶ್ ಅವರು, ದಾವಣಗೆರೆ ಉತ್ತರ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿ 5 ಮತಗಟ್ಟೆಗಳನ್ನು ಸಖಿ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಮಹಿಳಾ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆ ಇದಾಗಿದ್ದು ಎಲ್ಲಾ ಪಿಂಕ್ ಬಣ್ಣದಿಂದ ಕೂಡಿರುತ್ತದೆ. ಪಿಂಕ್ ಬಣ್ಣದಿಂದ ಸಿಂಗಾರಗೊಂಡಿರುವ ಮತಗಟ್ಟೆ, ಮತಗಟ್ಟೆಯಲ್ಲಿನ ಸಿಬ್ಬಂದಿಗಳು ಸಹ ಪಿಂಕ್ ಬಣ್ಣದ ಸ್ಯಾರಿಯನ್ನು ಧರಿಸಿರುತ್ತಾರೆ. ಚನ್ನಗಿರಿ ಪಟ್ಟಣದ ಬಿ.ಇ.ಓ ಕಚೇರಿ ಹಿಂಭಾಗದ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆಯಲ್ಲಿ ಇರುವ 169 ಮತಗಟ್ಟೆಯನ್ನು ಸಖಿ ಮತಗಟ್ಟೆಯನ್ನಾಗಿ ನಿರ್ಮಾಣ ಮಾಡಿಲಾಗಿದೆ. ಇಲ್ಲಿ ಪುರುಷ 608, ಮಹಿಳೆ 636 ಸೇರಿ ಒಟ್ಟು 1244 ಮತದಾರರಿದ್ದಾರೆ.
ಅಲ್ಲದೇ, ಜಿಲ್ಲೆಯಲ್ಲಿ ತಲಾ 1ಕ್ಷೇತ್ರದಲ್ಲಿ 1ರಂತೆ ವಿಶೇಷಚೇತನರ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಇಲ್ಲಿನ ಮತಗಟ್ಟೆ ಸಿಬ್ಬಂದಿಗಳೆಲ್ಲರೂ ವಿಶೇಷಚೇತನರಾಗಿರುತ್ತಾರೆ.