ಮಠ ಅವಿಭಕ್ತ ಕುಟುಂಬದಂತೆ

ಮಠ ಅವಿಭಕ್ತ ಕುಟುಂಬದಂತೆ

ಭಕ್ತರು ಅವಿಭಕ್ತ ಕುಟುಂಬದ ಸದಸ್ಯರಿದ್ದಂತೆ: ತರಳಬಾಳು ಶ್ರೀ

ದಾವಣಗೆರೆ, ಏ. 23- ಮಠ ಅವಿಭಕ್ತ ಕುಟುಂಬ ಇದ್ದಂತೆ. ಭಕ್ತರೆಲ್ಲರೂ ಅವಿಭಕ್ತ ಕುಟುಂಬದ ಸದಸ್ಯರಿದ್ದಂತೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಆನಗೋಡು ಶ್ರೀ ಮರಳಸಿದ್ದೇಶ್ವರ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ಮತ ಚಲಾಯಿಸದವರಿಗೆ ಸರ್ಕಾರದ ಸೌಲಭ್ಯ ಗಳನ್ನು ನಿಲ್ಲಿಸಬೇಕು ಎಂದು ಶ್ರೀಗಳು ಅಭಿಪ್ರಾಯಿಸಿದರು. ಪಕ್ಷಾಂತರ ಮಾಡುವುದನ್ನು ನಿಷೇಧ ಮಾಡ ಬೇಕು. 5 ವರ್ಷಗಳ ಕಾಲ ಪಕ್ಷದ ಸಕ್ರಿಯ ಸದಸ್ಯ ನಾದವರಿಗೆ ಟಿಕೆಟ್ ನೀಡುವಂತಹ ಕಾನೂನು ಜಾರಿ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಭಕ್ತರಿಗೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುವುದು ನಮ್ಮ ಜವಾಬ್ದಾರಿ. ಮುಂದಿನ ದಿನಗಳಲ್ಲಿ ತುಂಗಭದ್ರಾ ನದಿಯಿಂದ ನೀರು ಹರಿಸಲು ಇರುವ ತೊಂದರೆಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಶೇ.90ರಷ್ಟು ಕೆಲಸಗಳಾಗಿವೆ. ಆದರೆ ನ್ಯಾಯಾಲಯದಲ್ಲಿದ್ದ ದಾವೆಯಿಂದ ತಡವಾಗಿತ್ತು. ಆ ದಾವೆಯನ್ನು ಈಗ  ನಿವಾರಿಸಲಾಗಿದೆ. 

ಬರುವ ಮಳೆಗಾಲದಲ್ಲಿ ಈ ಯೋಜನೆಯಿಂದ ಹೊಳಲ್ಕೆರೆ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ, ಚಿತ್ರದುರ್ಗ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದರು.

ಸಾಧು ಸದ್ಧರ್ಮ ವೀರಶೈವ ಸಮಾಜ ಸಂಘದ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ ಮಾತನಾಡಿ, ಸಮ ಸಮಾಜ ನಿರ್ಮಾಣ ಮಾಡಲು ಹೋರಾಟ ಮಾಡಿದ ಮರುಳಸಿದ್ಧರ ಇತಿಹಾಸದಿಂದ ಮೈ ನವಿರೇಳುತ್ತದೆ.  ಮೂಢನಂಬಿಕೆ ವಿರುದ್ಧ ಹೋರಾ ಡಿದ ಮರುಳಸಿದ್ಧರ ಆಶಯದಂತೆ ವೈಚಾರಿಕ  ಅರಿವನ್ನು ಮೂಡಿಸಿಕೊಳ್ಳಬೇಕು ಎಂದರು.

ರಥದ ಬಾವುಟವನ್ನು 2.60 ಲಕ್ಷಕ್ಕೆ ಕೊಗ್ಗನೂರು ಹೇಮಂತರಾಜ್ ಹರಾಜು ಮೂಲಕ ತಮ್ಮದಾಗಿಸಿಕೊಂಡರು. ವಿಧಾನ ಸಭಾ ಕ್ಷೇತ್ರದ ಶಾಸಕ ಬಸವಂತಪ್ಪ. ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ ಗೌಡರು, ಹಾಲುವರ್ತಿ ಮಹೇಶ್ವರಪ್ಪ, ಬಿ. ವಾಮದೇವಪ್ಪ, ಆನೆಕೊಂಡ ಲಿಂಗರಾಜ ಮುಂತಾದವರು ಇದ್ದರು.

error: Content is protected !!