ಜಿಲೇಬಿ ಮಾಡಿ ಪ್ರತಿಭಟಿಸಿದ ಮಹಿಳಾ ಕಾಂಗ್ರೆಸ್
ದಾವಣಗೆರೆ, ಏ.7- ನಗರದ ಅಶೋಕ ಟಾಕೀಸ್ ರೈಲ್ವೆ ಗೇಟ್ ಬಳಿ ಇಂದು ವಿನೂತನ ಪ್ರತಿಭಟನೆ ನಡೆಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಜಿಲೆಬಿ ಮಾಡಿ ಪ್ರತಿರೋಧ ವ್ಯಕ್ತಪಡಿಸಿ ಕೆಳಸೇತುವೆಯಲ್ಲಿ ವಾಹನ ಚಲಾ ಯಿಸಿದ ಸವಾರರರಿಗೆ ಜಿಲೇಬಿ ವಿತರಿಸಿದರು.
ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿ ದುಕೊಂಡು ಹೋಗುವಂತಹ ರೈಲ್ವೆ ಕೆಳಸೇತುವೆ ನಿರ್ಮಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪ್ರತಿಮೆಯನ್ನು ದಾವಣಗೆರೆಯ ಅಶೋಕ ಟಾಕೀಸ್ ರೈಲ್ವೆ ಗೇಟ್ ಬಳಿ ಸ್ಥಾಪಿಸಬೇಕೆಂದು ಅನಿತಾಬಾಯಿ ಮಾಲತೇಶ್ ವ್ಯಂಗ್ಯವಾಡಿದರು.
ಸಿದ್ದೇಶ್ವರ ಅವರು ಮಾಡಿರುವ ಕೆಲಸ ಬೆರಳಣಿಕೆಯಷ್ಟು ಮಾತ್ರ. ಆದರೆ, ಅವೂ ಸಹ ಅವೈಜ್ಞಾನಿಕ ಮತ್ತು ಕಳಪೆಯಿಂದ ಕೂಡಿವೆ ಇಂತಹ ಕಾಮಗಾರಿಗಳ ಬಳಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಸಂಸದರು ಮಾಡಿರುವ ಕೆಲವೇ ಕಾಮಗಾರಿಗಳು ಅವೈಜ್ಞಾನಿ ಕವಾಗಿದ್ದು, ಇಂತಹ ಕಾಮಗಾರಿ ಗಳಿಂದ ದಾವಣ ಗೆರೆಗೆ ಕಳಂಕವಾಗಿವೆ ಎಂದು ದೂರಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್ ಮಾತನಾಡಿ, ಸಂಸದರು ನಾಲ್ಕು ಬಾರಿ ಆಯ್ಕೆಯಾದರೂ ಸಹ ಒಂದೇ ಒಂದು ಶಾಶ್ವತ ಕೆಲಸಗಳನ್ನು ಮಾಡಲಿಲ್ಲ. ಇಂದು ಅವರ ಶ್ರೀಮತಿಯವರನ್ನು ಅಭ್ಯರ್ಥಿ ಮಾಡಿ ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಮಹಿಳಾ ಕಾಂಗ್ರೆಸ್ನ ಕವಿತಾ ಚಂದ್ರಶೇಖರ್, ಉಮಾ ಕುಮಾರ್, ದ್ರಾಕ್ಷಾಯಣಮ್ಮ, ಮಂಗಳಮ್ಮ, ಮಂಜಮ್ಮ, ಶುಭಮಂಗಳ, ರಾಜೇಶ್ವರಿ, ಕಾವ್ಯ, ಜಯಮ್ಮ, ಕಮಲಮ್ಮ, ಸಲ್ಮಾ, ಶಿಲ್ಪ, ಕಾವೇರಿ, ರಂಗಸ್ವಾಮಿ, ಮೊಟ್ಟೆ ದಾದಾಪೀರ್ ಮತ್ತಿತರರಿದ್ದರು.