ಇಲಾಖೆ ಮೇಲಿನ ಜನರ ನಂಬಿಕೆ ಹುಸಿಯಾಗಬಾರದು

ಇಲಾಖೆ ಮೇಲಿನ ಜನರ ನಂಬಿಕೆ ಹುಸಿಯಾಗಬಾರದು

ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಬಸವರಾಜ್ ಇಂಗಿತ

ದಾವಣಗೆರೆ, ಏ.2-  ಜನರು ಸಂಕಷ್ಟದಲ್ಲಿದ್ದಾಗ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಲಿದೆ ಎಂಬ ನಂಬಿಕೆ ಎಂದೂ ಹುಸಿಯಾಗದಂತೆ ನಮ್ಮ ಸೇವೆ ನಿರಂತರವಾಗಿರಬೇಕೆಂದು ನಿವೃತ್ತ ಪೊಲೀಸ್ ಉಪನಿರೀಕ್ಷಕ ಸಿ.ಎನ್.ಬಸವರಾಜ್ ತಿಳಿಸಿದರು. 

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.  

ಸರ್ಕಾರದ ಬೇರೆ ಇಲಾಖೆಗಳ ಸೇವೆಗಿಂತಲೂ ಪೊಲೀಸ್ ಇಲಾಖೆ ಸೇವೆ ಭಿನ್ನವಾಗಿರುತ್ತದೆ. ಕಾನೂನು ಸುವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಯಾಗಲಿದೆ. ಅಲ್ಲದೇ   ಬೇರೆ ಇಲಾಖೆಗಿಂತ ಪೆೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಅತಿ ಮುಖ್ಯವಾಗಿರುತ್ತದೆ. ಪೆೊಲೀಸ್  ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳು ಕಾನೂನು ಪಾಲನೆ, ಅನುಷ್ಠಾನದಲ್ಲಿ ನೇರವಾಗಿ ಭಾಗಿಯಾಗುವರು. ಸಾರ್ವಜನಿಕರೊಂದಿಗೆ ಹತ್ತಿರದ ಸಂಬಂಧ ವಿರುತ್ತದೆ.  ಕಾನೂನು ಉಲ್ಲಂಘನೆಯಾದಾಗ ಜನಸಾಮಾನ್ಯರಿಗೆ ನೆರವಾಗುವ ಮೂಲಕ ರಕ್ಷಣೆ  ಒದಗಿಸುತ್ತಾರೆ ಎಂಬ ಅಪಾರವಾದ ನಂಬಿಕೆಯನ್ನು ಜನರು ಇಟ್ಟುಕೊಂಡಿರುತ್ತಾರೆ, ಪ್ರಾಮಾಣಿಕ ಸೇವೆ ಮಾಡುವ ಮೂಲಕ ಇಲಾಖೆಯ ಘನತೆ, ಗೌರವ ಹೆಚ್ಚು ಮಾಡೋಣ ಎಂದರು. 

ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಕೆ.ತ್ಯಾಗರಾಜನ್   ಅಧ್ಯಕ್ಷತೆ ವಹಿಸಿ,  ಪೊಲೀಸ್ ಧ್ವಜಗಳ ವಿತರಣೆ ಮಾಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಏಪ್ರಿಲ್ 2 ರಾಜ್ಯದಲ್ಲಿ ಪೆೊಲೀಸ್ ಕಾಯ್ದೆ ತಂದಂತಹ ದಿನ, 1965ರಿಂದ ಇಲ್ಲಿಯವರೆಗೂ ಕರ್ನಾಟಕ ರಾಜ್ಯ ಪೆೊಲೀಸ್  ಧ್ವಜ ದಿನಾಚರಣೆ ಯಾಗಿ ಆಚರಿಸುತ್ತಾ ಬರಲಾಗಿದೆ. ಪೆೊಲೀಸ್  ಇಲಾಖೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದಂತಹ ಪೆೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆಯನ್ನು ಸ್ಮರಿಸುವಂತಹ ಈ ದಿನ ಅವರ ಕಲ್ಯಾಣವೇ ನಮ್ಮ ಗುರಿಯಾಗಿದ್ದು, ನಿವೃತ್ತ ಅಧಿಕಾರಿಗಳು ಸಲ್ಲಿಸಿದ ಸೇವೆಯು,  ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸ್ಪೂರ್ತಿ ಹಾಗೂ ಮಾದರಿ ಯಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತರಾದ ಶೈಲಜಾ,  ನಿವೃತ್ತ ಅಧಿಕಾರಿಗಳಾದ  ಶಿವಾಚಾರ್ಯ, ಸಕ್ರಿ ಬಸವರಾಜಪ್ಪ, ರವಿ ನಾರಾಯಣ್, ಲಿಂಗಾರೆಡ್ಡಿ ಮತ್ತು ಪೆೊಲೀಸ್  ಇಲಾಖೆಯಲ್ಲಿನ ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಹೆಚ್ಚುವರಿ ಪೆೊಲೀಸ್  ಅಧೀಕ್ಷಕ  ವಿಜಯಕುಮಾರ್ ಎಂ. ಸಂತೋಷ್ ವಂದಿಸಿದರು.

error: Content is protected !!