ಪ್ರಶ್ನಿಸುವ, ಚರ್ಚಿಸುವ ಮನೋಭಾವ ಬೆಳಸಿಕೊಳ್ಳಿ

ಪ್ರಶ್ನಿಸುವ, ಚರ್ಚಿಸುವ ಮನೋಭಾವ ಬೆಳಸಿಕೊಳ್ಳಿ

ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಉಪನ್ಯಾಸ ಮಾಲಿಕೆಯಲ್ಲಿ ಡಾ.ನಟರಾಜ್

ದಾವಣಗೆರೆ, ಮಾ.28- ಪ್ರಸಕ್ತ ದಿನಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು  ನಿವೃತ್ತ ಪ್ರಾಧ್ಯಾಪಕ ಡಾ.  ನಟರಾಜ್ ವ್ಯಾಕುಲತೆ ವ್ಯಕ್ತ ಪಡಿಸಿದರು.

ನಗರದ ಜಿಲ್ಲಾ ಕೋರ್ಟ್‌ ಭವನದಲ್ಲಿ ಗುರುವಾರ ನಡೆದ ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಉಪನ್ಯಾಸ ಮಾಲಿಕೆ-7 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಳುವ, ಪ್ರಶ್ನಿಸುವ ಮತ್ತು ಚರ್ಚಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಯಶಸ್ವಿಗೊಳ್ಳಲಿದೆ ಎಂದರು.

ನ್ಯಾಯಾಲಯದ ಮೂಲ ಸೌಕರ್ಯ ಅಭಿವೃದ್ಧಿಯಾದಂತೆ, ವಕೀಲರ ಕೌಶಲ್ಯಗಳೂ  ಸಹ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಹಿರಿಯ ವಕೀಲರ ಸಹಾಯದಿಂದ ಕಿರಿಯ ವಕೀಲರು ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಕೀಲರ ಸಂಘವು ಈ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮಗಳಿಂದ ಜ್ಯೂನಿಯರ್ ವಕೀಲರಿಗೆ ಸಹಾಯಕವಾಗಿರುವುದನ್ನು ಶ್ಲ್ಯಾಘಿಸಿದರು.

ಮಕ್ಕಳ ಸ್ನೇಹಿ ನ್ಯಾಯಾಲಯದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್. ಶ್ರೀಪಾದ್ ಮಾತನಾಡಿ, ವಕೀಲರು ತಮ್ಮ ಅಪರಾಧಿಕ ಪ್ರಕರಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನ್ಯಾಯ-ವಿಜ್ಞಾನ ಉಪನ್ಯಾಸ ಸಹಾಯಕವಾಗಿದೆ ಎಂದು ಹೇಳಿದರು.

ನ್ಯಾಯಾಧೀಶರು, ವಕೀಲರು, ಪೊಲೀಸರು ಮತ್ತು ವೈದ್ಯರಿಗೆ ಇಂತಹ ಕಾರ್ಯಕ್ರಮ ಮುಖ್ಯವಾಗಿ ಬೇಕು ಎಂದು ಅಭಿಪ್ರಾಯ ಪಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಮಾತನಾಡಿ, ನೈಜವಾಗಿ ನ್ಯಾಯ ನಿರ್ಣಯ ಕೈಗೊಳ್ಳಲು ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಸಹಾಯಕ ವಾಗಲಿದೆ ಎಂದು ಹೇಳಿದರು.

ವಕೀಲರ ಸಂಘದಿಂದ ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚಾಗಿ ನಡೆಯಲಿ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್‌. ಅರುಣ್‌ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ವಕೀಲರಿಗೆ ನ್ಯಾಯ ವಿಜ್ಞಾನದ ಅರಿವು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಕಾಲಕಾಲಕ್ಕೆ ಕಾನೂನು ಜ್ಞಾನವನ್ನು
ಹರಿತಗೊಳಿಸುವ ನಿಟ್ಟಿನಲ್ಲಿ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಯುವ ವಕೀಲರಿಗೆ ಸಹಾಯಕವಾಗಲಿವೆ ಎಂದು ಹೇಳಿದರು.

ನ್ಯಾಯಾಧೀಶರಾದ ಕೆ. ದಶರಥ್, ಪ್ರಧಾನ ಹಿರಿಯ  ಸಿವಿಲ್‌ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗೆರೆ, ಪ್ರವೀಣ್‌ ಕುಮಾರ್‌, ಸಹ ಕಾರ್ಯದರ್ಶಿ ಎ. ಎಸ್. ಮಂಜುನಾಥ್‌, ಕಾರ್ಯದರ್ಶಿ ಎಸ್‌. ಬಸವರಾಜ್ ಹಾಗೂ ಇತರರು ಇದ್ದರು.

error: Content is protected !!