ಮಲೇಬೆನ್ನೂರು ತಲುಪಿದ ಭದ್ರಾ ನೀರು

ಮಲೇಬೆನ್ನೂರು ತಲುಪಿದ ಭದ್ರಾ ನೀರು

ಮಲೇಬೆನ್ನೂರು, ಮಾ.21- ಭದ್ರಾ ಜಲಾಶಯದಿಂದ ಮಾ.19ರ ರಾತ್ರಿಯಿಂದ ಬಲದಂಡೆ ನಾಲೆಗೆ ನೀರು ಬಿಡುಗಡೆಯಾಗಿದ್ದು, ಗುರುವಾರ ಸಂಜೆ ವೇಳೆಗೆ ಮಲೇಬೆನ್ನೂರು ಭಾಗದ ಭದ್ರಾ ಕಾಲುವೆಗಳಲ್ಲಿ ನೀರು ಹರಿದು ಬಂದಿತು.

ನೀರು ಬರುವುದನ್ನೇ ಕಾಯುತ್ತಿದ್ದ ತೋಟಗಳ ರೈತರು ನಿಟ್ಟುಸಿರು ಬಿಟ್ಟರು. ಉಪಕಾಲುವೆಗಳಿಗೆ ಆಂತರಿಕ ಸರದಿ ಪ್ರಕಾರ ನೀರು ಹರಿಸುವ ಸಾಧ್ಯತೆ ಇದ್ದು, ಮುಂದಿನ 4-5 ದಿನಗಳಲ್ಲಿ ಎಲ್ಲಾ ಕಾಲುವೆಗಳಿಗೆ  ನೀರು ಬರುವಂತೆ ಇಂಜಿನಿಯರ್‌ಗಳು ನೀರಿನ ನಿರ್ವಹಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಏ.3 ರವರೆಗೆ ಅಂದರೆ 14 ದಿನ ನಾಲೆಗಳಲ್ಲಿ ನೀರು ಹರಿಯಲಿದೆ. 

ಅನುಕೂಲ : ಮಲೇಬೆನ್ನೂರಿನಲ್ಲಿ ಗ್ರಾಮದೇವತೆ ಹಬ್ಬ ಮುಗಿಯುವ ವೇಳೆಗೆ ನಾಲೆಯಲ್ಲಿ ನೀರು ಬಂದಿರುವುದರಿಂದ ಬಟ್ಟೆ ಹಾಗೂ ಪಾತ್ರೆ-ಪಡಗ ತೊಳೆಯಲು ತುಂಬಾ ಅನುಕೂಲವಾಗಲಿದೆ. ಜೊತೆಗೆ ಕುಡಿಯುವ ನೀರಿಗೂ ಸಹಕಾರಿಯಾಗಲಿದೆ.

error: Content is protected !!