ದಾವಣಗೆರೆ, ಮಾ. 20- ವಿಶ್ವ ಮಹಿಳಾ ದಿನಾಚರಣೆ ಆಂಗವಾಗಿ ನಗರದ ಡಾ. ಸದ್ಯೋಜಾತ ಸ್ವಾಮೀಜಿಯವರ ಹಿರೇಮಠದ ಸಭಾಂಗಣದಲ್ಲಿ ಸ್ನೇಹ ಮಹಿಳಾ ಬಳಗದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆ ಗೌರವ ಸಮರ್ಪಿಸಲಾಯಿತು.
ಸ್ನೇಹ ಮಹಿಳಾ ಬಳಗದ ಕಾರ್ಯಕರ್ತೆಯರು ಯಶಸ್ವೀ ಮಹಿಳೆ ಎನಿಸಿಕೊಂಡಿರುವ ಅನ್ನಪೂರ್ಣಮ್ಮ ಹಾಗೂ ನಂದಾ ಅಶೋಕ ಅಕ್ಕಿ ಅವರನ್ನು ಇದೇ ವೇಳೆ ಸೀರೆ, ತಾಂಬೂಲ ನೀಡಿ ಗೌರವಿಸಿದರು.
ಇದೇ ವೇಳೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಸ್ಥಾಪಕ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾ ಚೈತನ್ಯ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದು, ಪುರುಷ ಮತ್ತು ಮಹಿಳೆ ಸಮನಾಗಿ ಬೆಳೆಯುತ್ತಿರುವುದನ್ನು ನಾವು ಕಾಣುತ್ತೇವೆ ಎಂದರು.
ಭಾರತೀಯ ಕೃಷಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮತ್ತು ಸ್ನೇಹ ಮಹಿಳಾ ಬಳಗದ ಸಹಯೋಗದಲ್ಲಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರ ಮಗಳನ್ನು ಆಯೋಜಿಸುತ್ತಾ ಬರ ಲಾಗಿದೆ. ಇದೀಗ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾನಿಗಳ ನೆರವಿನಿಂದ ನೂರಾ ಐವತ್ತು ಸೈಕಲ್ ಗಳನ್ನು ಹಂತ ಹಂತವಾಗಿ ವಿತರಣೆ ಮಾಡುತ್ತಾ ಬರಲಾಗಿದ್ದು, ಇಂದು ಸಹ ಐವತ್ತು ಸೈಕಲ್ ಗಳನ್ನು ವಿತರಣೆ ಮಾಡಿರುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತ ನಾಡಿದ ಸ್ನೇಹ ಮಹಿಳಾ ಬಳಗದ ಗೌರವಾಧ್ಯಕ್ಷರಾದ ಮಂಜುಳಾ ಬಸವಲಿಂಗಪ್ಪ ಅವರು, ಸ್ನೇಹ ಮಹಿಳಾ ಬಳಗ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಆರೋಗ್ಯ, ಶಿಕ್ಷಣ, ಪರಿಸರ, ಸ್ವಾವಲಂಬಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳು, ಬಡವರಿಗೆ ಧನ ಸಹಾಯ, ವಸ್ತುಗಳ ರೂಪದಲ್ಲಿ ಸಹಾಯ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುವುದು ಶ್ಲ್ಯಾಘನೀಯ ಎಂದರು.
ಬಳಗದ ಅಧ್ಯಕ್ಷೆ ಶೋಭಾ ರವಿ ಅಧ್ಯಕ್ಷತೆ ವಹಿಸಿದ್ದರು. ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಪ್ರೊ. ಬಸವರಾಜ್, ಬಳಗದ ಪದಾಧಿಕಾರಿಗಳಾದ ತುಳಸಿ ಮಹೇಶ್, ಸುವರ್ಣಾ ದೊಗ್ಗಳ್ಳಿ, ಮಂಜುಳಾ ನಿಂಗಪ್ಪ, ನಾಗರತ್ನ, ಚೈತ್ರಾ ಮೋಹನ್ ಮತ್ತಿತರರು ಭಾಗವಹಿಸಿದ್ದರು.